ಫೆ.27ಕ್ಕೆ ದೆಹಲಿಯಿಂದ ಪ್ರಧಾನಿ ಮೋದಿ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್!

ರಾಜಕೀಯ ನಿವೃತ್ತಿ ಸೂಚನೆ ನೀಡಿದ ಸೋನಿಯಾ ಗಾಂಧಿ, ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ, ಬಿಜೆಪಿಯಿಂದ 8,000 ಕಿಲೋಮೀಟರ್ ರಥಯಾತ್ರೆ, ದಾವಣಗೆರೆಯಲ್ಲಿ ಸಮಾವೇಶ, ಹಾಸನದಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ಸೇರಿದಂತೆ ಇಂದಿನ ಇಡೀ ದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Feb 25, 2023, 11:26 PM IST | Last Updated Feb 25, 2023, 11:26 PM IST

ಫೆಬ್ರವರಿ 27ಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ 80ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಇದೇ ದಿನ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯೂ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಈಗಾಗಲೇ ಟ್ರಯಲ್ ಬೇಸ್ ಮೇಲೆ 2 ವಿಮಾನಗಳು ಲ್ಯಾಂಡ್ ಆಗಿವೆ.775 ಎಕರೆ ಪ್ರದೇಶದಲ್ಲಿ ಶಿವಮೊಗ್ಗ ನೂತನ ವಿವಾನ ನಿಲ್ದಾಣ ತಲೆ ಎತ್ತಿದೆ. 450 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. 3.2 ಕಿಲೋಮೀಟರ್ ರನ್ ವೇ ಹೊಂದಿದೆ. ವಿಮಾನ ನಿಲ್ದಾಣದ ಸುತ್ತಲಿನ ಕೌಂಪೌಂಡ್ 15,900 ಮೀಟರ್ ಉದ್ದವಿದೆ. ಈ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಬೆಳಗಾವಿಗೆ ತೆರಳಲಿದ್ದಾರೆ. ಬೆಳಗಾವಿಯಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ.