Covid 19 Control: ನಾಳೆ (ಜ.13) ಸಿಎಂಗಳ ಜತೆ ಮೋದಿ ಸಭೆ, ರಾಜ್ಯದ ಲಾಕ್‌ಡೌನ್ ಭವಿಷ್ಯ ನಿರ್ಧಾರ?
ಕೋವಿಡ್ ಹೊಸ ರೂಪಾಂತರಿ ಒಮಿಕ್ರೋನ್‌ನಿಂದಾಗಿ (Omicron)ದೇಶಾದ್ಯಂತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ ಅಂದ್ರೆ ಜ.13ರಂದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಬೆಂಗಳೂರು (ಜ. 12): ಕೋವಿಡ್ ಹೊಸ ರೂಪಾಂತರಿ ಒಮಿಕ್ರೋನ್‌ನಿಂದಾಗಿ (Omicron)ದೇಶಾದ್ಯಂತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ ಅಂದ್ರೆ ಜನವರಿ 13ರಂದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜಧಾನಿ ಬೆಂಗಳೂರಿಗೆ (Bengaluru) ಪ್ರತ್ಯೇಕ ಗೈಡ್‌ಲೈನ್ಸ್ (Guidelines) ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಈಗಾಗಲೇ 50:50 ರೂಲ್ಸ್ ಅನ್ವಯವಾಗಲಿದೆ. ನಾಳೆಯ ಸಭೆಯಲ್ಲಿ ಲಾಕ್‌ಡೌನ್, ಟಫ್‌ರೂಲ್ಸ್ ಬಗ್ಗೆ ಚರ್ಚೆಯಾಗಲಿದೆ.
Omicron Variant: ರೋಗಲಕ್ಷಣ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ
ಕೇಂದ್ರ ಸರ್ಕಾರ, ಎರಡು ದಿನಗಳ ಹಿಂದೆ ರಾಜ್ಯಗಳಿಗೆ ಪತ್ರ ಬರೆದು, ಆಸ್ಪತ್ರೆ ದಾಖಲಾತಿ ಈಗ ಕಡಿಮೆ ಇರಬಹುದು. ಆದರೆ ಯಾವುದೇ ಸಮಯದಲ್ಲಿ ಪರಿಸ್ಥಿತಿ ಬದಲಾಗಬಹುದು. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಎಲ್ಲಾ ಮೂಲಸೌಕರ್ಯ ವ್ಯವಸ್ಥೆ ಸಿದ್ದ ಮಾಡಿಟ್ಟುಕೊಳ್ಳಿ ಎಂದು ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಇದೀಗ ಮೋದಿ, ಸಿಎಂಗಳ ಜೊತೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.