
ಫ್ರೀ ಸ್ಕೀಂ ಅಪಾಯದ ಎಚ್ಚರಿಕೆ ಕೊಟ್ಟ ಪ್ರಧಾನಿ: ಏನಿದು ಮೋದಿ ಹೇಳಿದ ರೇವ್ಡಿ ಜಾಗೃತಿ?
‘ಮತ ಗಳಿಸುವ ಉದ್ದೇಶದಿಂದ ಪಕ್ಷಗಳು ಪುಕ್ಕಟೆ ಆಫರ್‌ಗಳನ್ನು ನೀಡುವ ಭರವಸೆಗಳು ದೇಶದ ಅಭಿವೃದ್ಧಿಗೆ ತುಂಬಾ ಮಾರಕ. ಇದರ ವಿರುದ್ಧ ದೇಶದ ಜನರು ಅದರಲ್ಲೂ ವಿಶೇಷವಾಗಿ ಯುವಕರು ಕಡಿವಾಣ ಹಾಕಬೇಕು. ದೇಶದ ರಾಜಕೀಯದಿಂದ ಈ ಸಂಸ್ಕೃತಿಯನ್ನು ತೆಗೆದುಹಾಕಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
‘ಮತ ಗಳಿಸುವ ಉದ್ದೇಶದಿಂದ ಪಕ್ಷಗಳು ಪುಕ್ಕಟೆ ಆಫರ್‌ಗಳನ್ನು (free scheme) ನೀಡುವ ಭರವಸೆಗಳು ದೇಶದ ಅಭಿವೃದ್ಧಿಗೆ ತುಂಬಾ ಮಾರಕ. ಇದರ ವಿರುದ್ಧ ದೇಶದ ಜನರು ಅದರಲ್ಲೂ ವಿಶೇಷವಾಗಿ ಯುವಕರು ಕಡಿವಾಣ ಹಾಕಬೇಕು. ದೇಶದ ರಾಜಕೀಯದಿಂದ ಈ ಸಂಸ್ಕೃತಿಯನ್ನು ತೆಗೆದುಹಾಕಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ- ಹಿಂದ್?
‘ದೇಶದ ಜನರ ಆಶೋತ್ತರಗಳಿಗೆ ಹೊರತಾದ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು. ಕೈಗೆತ್ತಿಕೊಂಡರೆ ಭವಿಷ್ಯವು ಅಂಧಕಾರದಲ್ಲಿ ಮುಳುಗಲಿದೆ. ಆದರೆ ಇಂದು ‘ರೇವಡಿ’ (ಉತ್ತರ ಪ್ರದೇಶದ ಒಂದು ಪ್ರಸಿದ್ಧ ಮಿಠಾಯಿ) ಸಂಸ್ಕೃತಿ ಬೆಳೆಯುತ್ತಿದ್ದು, ಈ ಸಿಹಿ ತಿನಿಸನ್ನು ಪುಕ್ಕಟೆಯಾಗಿ ನೀಡುವ ಆಸೆ ತೋರಿಸಿ ಮತ ಗಳಿಸುವ ಯತ್ನಗಳು ನಡೆಯುತ್ತಿವೆ. ಈ ಸಂಸ್ಕೃತಿಗೆ ದೇಶದ ಜನರು, ಅದರಲ್ಲೂ ಯುವಕರು ಕಡಿವಾಣ ಹಾಕಬೇಕು. ಏಕೆಂದರೆ ಈ ‘ಮಿಠಾಯಿ ಸಂಸ್ಕೃತಿ’ಯಿಂದ ದೇಶದಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿ, ವಿಮಾನ ನಿರ್ಮಾಣ, ರಕ್ಷಣಾ ಕಾರಿಡಾರ್ ನಿರ್ಮಿಸಲು ಆಗದು’ ಎಂದು ಪ್ರಧಾನಿ ಕರೆ ನೀಡಿದ್ದಾರೆ.