Maybach Car: ಮೋದಿ ಬತ್ತಳಿಕೆಗೆ ಹೊಸ ಕಾರು, ಜಗತ್ತಲ್ಲೇ ಇಲ್ವಂತೆ ಇಂಥಾ ಸುರಕ್ಷಿತ ಕಾರು!

ಹೊಸ ವರ್ಷದ ಹೊಸ್ತಿಲಲ್ಲಿ ಪ್ರಧಾನಿ ಮೋದಿ (PM Modi) ಹೊಸ ಕಾರನ್ನು ಬಳಸುತ್ತಿದ್ದಾರೆ. ಈ ಕಾರಿನ ಸ್ಪೆಷಾಲಿಟಿ ಚರ್ಚೆಯ ವಿಷಯವಾಗಿದೆ. ದೇಶದಲ್ಲಿ ಅತ್ಯಂತ ಭದ್ರತೆ ಹೊಂದಿರುವ ಗಣ್ಯರ ಪೈಕಿ  ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 29): ಹೊಸ ವರ್ಷದ ಹೊಸ್ತಿಲಲ್ಲಿ ಪ್ರಧಾನಿ ಮೋದಿ (PM Modi) ಹೊಸ ಕಾರನ್ನು ಬಳಸುತ್ತಿದ್ದಾರೆ. ಈ ಕಾರಿನ ಸ್ಪೆಷಾಲಿಟಿ ಚರ್ಚೆಯ ವಿಷಯವಾಗಿದೆ. ದೇಶದಲ್ಲಿ ಅತ್ಯಂತ ಭದ್ರತೆ ಹೊಂದಿರುವ ಗಣ್ಯರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಅಮೆರಿಕದ ಮರ್ಸಿಡಿಸ್‌ ಬೆಂಝ್‌ ಕಂಪನಿ ತಯಾರಿಸಿರುವ ‘ಮೈಬ್ಯಾಕ್‌ ಎಸ್‌ 650’ (Mercedes MayBach) ಕಾರನ್ನು ಇದೀಗ ಪ್ರಧಾನಿ ಮೋದಿಗೆ ನೀಡಲಾಗಿದ್ದು, ಅವರಿಗೆ ಭಾರೀ ಅಪಾಯದ ಸಂದರ್ಭಗಳಲ್ಲೂ ಇದು ಗರಿಷ್ಠ ಸುರಕ್ಷತೆಯನ್ನು ನೀಡಲಿದೆ.

News Hour: ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲಾ ಹೊಸ ನಿಯಮ?

ಇದರೊಂದಿಗೆ ಇದುವರೆಗೆ ರೇಂಜ್‌ ರೋವರ್‌ ವಾಗ್‌, ಟೊಯೋಟಾ ಲ್ಯಾಂಡ್‌ ಕ್ರೂಸರ್‌ ಮೊದಲಾದವುಗಳನ್ನು ತಮ್ಮ ಸಂಚಾರಕ್ಕೆ ಬಳಸುತ್ತಿದ್ದ ಪ್ರಧಾನಿ ಬತ್ತಳಿಕೆಗೆ ಹೊಸ ಕಾರು ಸೇರ್ಪಡೆಯಾದಂತಾಗಿದೆ. 12 ಕೋಟಿ ರು. ಬೆಲೆಬಾಳುವ ಕಾರನ್ನು ಮರ್ಸಿಡಿಸ್‌ ಕಂಪನಿ, ಬೇಡಿಕೆಗೆ ತಕ್ಕಂತೆ ವಿಶೇಷವಾಗಿ ರೂಪಿಸಿಕೊಡುತ್ತದೆ. ಎಕೆ 47 ಗನ್‌ನಿಂದ ನಡೆಸುವ ದಾಳಿ ತಡೆಯುವ, ಕಾರಿನ 2 ಮೀಟರ್‌ ವ್ಯಾಪ್ತಿಯಲ್ಲಿ 15 ಕೇಜಿ ಟಿಎನ್‌ಟಿ ಸ್ಫೋಟವಾದರೂ ರಕ್ಷಣೆ ನೀಡುವ, ವಿಷಾನಿಲ ದಾಳಿ ವೇಳೆ ಒಳಗಿದ್ದವರಿಗೆ ಗಾಳಿಯ ಪೂರೈಕೆಗಾಗಿ ಪ್ರತ್ಯೇಕ ವ್ಯವಸ್ಥೆ, ಇಂಧನ ಟ್ಯಾಂಕ್‌ ಪಂಚರ್‌ ಆದರೆ ಸ್ವಯಂ ಸರಿಪಡಿಸುವ ವಿಶೇಷ ವ್ಯವಸ್ಥೆ, ಏನೇ ಹಾನಿಯಾದರೂ ತ್ವರಿತವಾಗಿ ಸ್ಥಳದಿಂದ ತೆರಳಲು ಅವಕಾಶ ಕಲ್ಪಿಸುವ ಟೈಯರ್‌ ಮೊದಲಾದ ವಿಶೇಷತೆಗಳನ್ನು ಕಾರು ಒಳಗೊಂಡಿದೆ.

Related Video