Asianet Suvarna News Asianet Suvarna News

1991.. ಅಂದೇ ಮೋದಿ ಮಾಡಿದ್ದರು ರಾಮಮಂದಿರ ನಿರ್ಮಾಣದ ಮಹಾ ಶಪಥ..!

ಅದು 1991. ಅಯೋಧ್ಯೆಯಲ್ಲಿ ರಾಮನಿಗೊಂದು ಅಲಯ ಕಟ್ಟಲು ಬಿಜೆಪಿ ಅವಿರತ ಶ್ರಮ ಪಟ್ಟಿತ್ತು. ಅದರ ನೇತೃತ್ವ ವಹಿಸಿಕೊಂಡವರಲ್ಲಿ ಒಬ್ಬರು ಎಲ್‌ ಕೆ ಅಡ್ವಾಣಿ. ಗುಜರಾತಿನ ಸೋಮನಾಥದಿಂದ ಲಾಲ್‌ ಕೃಷ್ಣ ಅಡ್ವಾಣಿಯವರು ರಥಯಾತ್ರೆಗೆ ಚಾಲನೆ ಕೊಡುತ್ತಾರೆ. ರಥಯಾತ್ರೆಯ ನೇತೃತ್ವ ವಹಿಸಿದ್ದು ಅಡ್ವಾಣಿಯಾದರೆ ಅದರ ರೂಪುರೇಷೆ ರಚಿಸಿ, ಜವಾಬ್ದಾರಿ ತೆಗೆದುಕೊಂಡಿದ್ದು ನರೇಂದ್ರ ಮೋದಿ. 

ನವದೆಹಲಿ (ಆ. 01): ಅದು 1991. ಅಯೋಧ್ಯೆಯಲ್ಲಿ ರಾಮನಿಗೊಂದು ಅಲಯ ಕಟ್ಟಲು ಬಿಜೆಪಿ ಅವಿರತ ಶ್ರಮ ಪಟ್ಟಿತ್ತು. ಅದರ ನೇತೃತ್ವ ವಹಿಸಿಕೊಂಡವರಲ್ಲಿ ಒಬ್ಬರು ಎಲ್‌ ಕೆ ಅಡ್ವಾಣಿ. ಗುಜರಾತಿನ ಸೋಮನಾಥದಿಂದ ಲಾಲ್‌ ಕೃಷ್ಣ ಅಡ್ವಾಣಿಯವರು ರಥಯಾತ್ರೆಗೆ ಚಾಲನೆ ಕೊಡುತ್ತಾರೆ. ರಥಯಾತ್ರೆಯ ನೇತೃತ್ವ ವಹಿಸಿದ್ದು ಅಡ್ವಾಣಿಯಾದರೆ ಅದರ ರೂಪುರೇಷೆ ರಚಿಸಿ, ಜವಾಬ್ದಾರಿ ತೆಗೆದುಕೊಂಡಿದ್ದು ನರೇಂದ್ರ ಮೋದಿ.

ರಥಯಾತ್ರೆಯಲ್ಲಿ ಮುಂಚೂಣಿಯಲ್ಲಿದ್ದ ಮೋದಿಯವರ ಫೋಟೋ ತೆಗೆದ ಮಹೇಂದ್ರ ತ್ರಿಪಾಟಿ, 'ಮೋದಿ  ಜಿ, ನೀವು ಮತ್ಯಾವಾಗ ಬರ್ತೀರಿ'? ಅಂದಾಗ 'ರಾಮಮಂದಿರ ನಿರ್ಮಾಣ ಕಾರ್ಯ ಶುರುವಾದಾಗ' ಅಂತಾರೆ. ಈಗ ಅವರ ಮಾತು ಸತ್ಯವಾಗುವ ಸಮಯ ಹತ್ತಿರ ಬಂದಿದೆ. ರಾಮಮಂದಿರ ಕಾರ್ಯಕ್ಕೆ ಭೂಮಿಪೂಜೆಯನ್ನು ಸ್ವತಃ ಮೋದಿಯವರೇ ಮಾಡಲಿದ್ಧಾರೆ. ಅಂದು ಹೇಳಿದ್ದ ಮಾತು ಸತ್ಯವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತವಿಟ್ಟದ್ದು ನಮ್ಮ ಕನ್ನಡಿಗ..!

Video Top Stories