ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತವಿಟ್ಟದ್ದು ನಮ್ಮ ಕನ್ನಡಿಗ..!

ಅಯೋಧ್ಯೆಯಲ್ಲಿ ಆ.5 ರಂದು ನಡೆಯಲಿರುವ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕರ್ನಾಟಕದ ಬೆಳಗಾವಿಯ ವಿದ್ವಾಂಸರೊಬ್ಬರು ರಾಮಜನ್ಮ ಭೂಮಿ ಟ್ರಸ್ಟ್‌ಗೆ ಮುಹೂರ್ತವನ್ನು ನೀಡಿರುವುದು ಹೆಮ್ಮೆಯ ವಿಚಾರ.  
 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 29): ಅಯೋಧ್ಯೆಯಲ್ಲಿ ಆ.5 ರಂದು ನಡೆಯಲಿರುವ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕರ್ನಾಟಕದ ಬೆಳಗಾವಿಯ ವಿದ್ವಾಂಸರೊಬ್ಬರು ರಾಮಜನ್ಮ ಭೂಮಿ ಟ್ರಸ್ಟ್‌ಗೆ ಮುಹೂರ್ತವನ್ನು ನೀಡಿರುವುದು ಹೆಮ್ಮೆಯ ವಿಚಾರ.

ರಾಮಮಂದಿರ ಟ್ರಸ್ಟ್‌ನಲ್ಲಿರುವ ಹರಿದ್ವಾರ ಕ್ಷೇತ್ರದ ಪೂಜ್ಯ ಗೋವಿಂದದೇವಗಿರಿ ಸ್ವಾಮೀಜಿ ತನ್ನನ್ನು ನೇರವಾಗಿ ಸಂಪರ್ಕಿಸಿ ಮುಹೂರ್ತ ನೀಡುವಂತೆ ಕೇಳಿದ್ದರು. ಅದರಂತೆ ರಾಮಮಂದಿರ ಟ್ರಸ್ಟ್‌ ಸಭೆ ಮಾಡುವ ಮೊದಲೇ 4 ಮುಹೂರ್ತಗಳನ್ನು ಜು.15ರಂದೇ ಕಳುಹಿಸಿಕೊಟ್ಟಿದ್ದೆ. ಟ್ರಸ್ಟ್‌ ಆ.5ರ ಮುಹೂರ್ತವನ್ನು ಅಂತಿಮಗೊಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಗೋವಿಂದದೇವಗಿರಿ ಸ್ವಾಮೀಜಿ ಅವರ ಕೋರಿಕೆ ಮೇರೆಗೆ ಅಟಲ… ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ತಾನೇ ಮುಹೂರ್ತ ನೀಡಿದ್ದಾಗಿ ಅವರು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ಮೋದಿಯಿಂದಲೇ ಆ. 5 ಕ್ಕೆ ಮಂದಿರಕ್ಕೆ ಭೂಮಿಪೂಜೆ ಶುಭಾರಂಭ!

Related Video