Asianet Suvarna News Asianet Suvarna News

ಭಾರತದ ದಕ್ಷಿಣದ ತುದಿಯಿಂದ ಬಿಜೆಪಿ ಕಟ್ಟಲು ಮೋದಿ ತಂತ್ರ, ತಮಿಳುನಾಡಿನಲ್ಲಿ ಹೊಸ ಅಲೆ!

ತಮಿಳುನಾಡಿನಲ್ಲಿ ಮೋದಿ ಭರ್ಜರಿ ಪ್ರಚಾರ, ಬಿಸಿ ತುಪ್ಪವಾಗಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ, ಒಕ್ಕಲಿಗ ಅಧಿಪತ್ಯಕ್ಕೆ ಪೈಪೋಟಿ, ನಿರ್ಮಲಾಂದ ಶ್ರೀಗಳ ಭೇಟಿ ಬಳಿಕ ನಾಯಕರ ವಾಕ್ಸಮರ, ಒಕ್ಕಲಿಗ ಅಧಿಪತ್ಯಕ್ಕೆ ಪೈಪೋಟಿ, ನಿರ್ಮಲಾನಂದ ಶ್ರೀಗಳ ಭೇಟಿ ಬಳಿಕ ನಾಯಕರ ವಾಕ್ಸಮರ
 

ತಮಿಳುನಾಡಿನಲ್ಲಿ ಬಿಜೆಪಿ ನೆಲೆ ಕಂಡುಕೊಂಡಿಲ್ಲ. ಆದರೆ ನೆಲೆಯಿಲ್ಲದ ತಮಿಳುನಾಡಿನಲ್ಲೇ ಬಿಜೆಪಿ ಅರಳಿಸಲು ಪ್ರಧಾನಿ ಮೋದಿ ಶತಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂರುವರೆ ಶೇಕಡಾ ಮತಗಳಿಕೆ ಪಡೆದಿದ್ದ ತಮಿಳುನಾಡು ಈ ಬಾರಿ ಎರಡಂಕೆ ದಾಟಲಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಇತ್ತ ಪ್ರಧಾನಿ ಮೋದಿ ಇಂದು ತಮಿಳುನಾಡಿನಲ್ಲಿ 2 ಸಮಾವೇಶ ಹಾಗೂ 1 ರೋಡ್ ಶೋ ನಡೆಸಿದ್ದಾರೆ. ಇತ್ತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಳಮಟ್ಟದಿಂದ ಬಿಜೆಪಿ ಕಟ್ಟುತ್ತಿದ್ದಾರೆ. ಇದು ಕೂಡ ಮೋದಿಗೆ ವರವಾಗಿದೆ. 

Video Top Stories