Asianet Suvarna News Asianet Suvarna News

ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿ ಮತ್ತೊಂದು ಸಾಹಸ, ದ್ವಾರಕಾದಲ್ಲಿ ಸ್ಕೂಬಾ ಡೈವಿಂಗ್!

ಅಭಿವೃದ್ಧಿ ಯೋಜನೆಗಳಿಗೆ ಚಾಲನೆಗೆ ಶ್ರೀಕೃಷ್ಣನಗರಿಗೆ ತೆರಳಿದ ಪ್ರಧಾನಿ ಮೋದಿ ಸ್ಕೂಬಾ ಡೈವಿಂಗ್ ಮೂಲಕ  ಮತ್ತೊಂದು ಸಾಹಸ ಮಾಡಿದ್ದಾರೆ. ಸಮುದ್ರದ ಆಳಕ್ಕೆ ತೆರಳಿ ದ್ವಾರಕದ ಶ್ರೀಕೃಷ್ಣನ ದರ್ಶನ ಮಾಡಿದ್ದಾರೆ.

ದ್ವಾರಕ(ಫೆ.25) ಪ್ರಧಾನಿ ನರೇಂದ್ರ ಮೋದಿ ಇಂದು ದ್ವಾರಕದಲ್ಲಿ 4,150 ಕೋಟಿ ರೂಪಾಯಿಗೂ ಅದಿಕ ಮೊತ್ತದ್ದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ. ಶ್ರೀಕೃಷ್ಣನ ನಗರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಆಳ ಸಮುದ್ರಕ್ಕಿಳಿದು ಶ್ರೀಕೃಷ್ಣನ ಭವ್ಯ ಅರಮನೆ ದರ್ಶನ ಪಡೆದಿದ್ದಾರೆ. ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಾಳಕ್ಕೆ ಇಳಿದ ಮೋದಿ ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Video Top Stories