ನಾಲ್ಕು ರಾಜ್ಯಗಳಲ್ಲಿ ಗೆದ್ದ ಬಿಜೆಪಿ, 2 ದಿನದ ಗುಜರಾತ್ ಪ್ರವಾಸದಲ್ಲಿ ಮೋದಿ, ತವರುನಾಡಿನಲ್ಲಿ ರೋಡ್‌ಶೋ!

* ನಾಲ್ಕು ರಾಜ್ಯಗಳನ್ನು ಗೆದ್ದ ಬಿಜರೆಪಿಗೆ ಸಂಭ್ರಮ* ಬಿಜೆಪಿ ಗೆಲುವಿನ ಬೆನ್ನಲ್ಲೇ ತವರು ನಾಡಿನಲ್ಲಿ ಮೋದಿ ರೋಡ್‌ಶೋ* ಗುಜರಾತ್‌ನಲ್ಲಿ ಮೋದಿಇ ಸ್ವಾಗತಕ್ಕೆ ನೆರೆದ ಜನ

Share this Video
  • FB
  • Linkdin
  • Whatsapp

ಲಕ್ನೋ(ಮಾ.11): ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 11-12 ರಂದು ಗುಜರಾತ್ ಪ್ರವಾಸದಲ್ಲಿದ್ದಾರೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದರಿಂದ ಅವರ ಭೇಟಿ ಈಗ ಮಹತ್ವ ಪಡೆದುಕೊಂಡಿದೆ. ಪ್ರಧಾನಿಯವರು ಗುಜರಾತ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಗುಜರಾತ್ ತಲುಪಿದ ಮೋದಿ ಮೊದಲ ದಿನ ಅಹಮದಾಬಾದ್‌ನಲ್ಲಿ ರೋಡ್ ಶೋ ನಡೆಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಅವಧಿಯ ನಂತರ, ಯಾವುದೇ ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೋದಿ ಮೊದಲ ಬಾರಿಗೆ ತಮ್ಮ ತವರು ರಾಜ್ಯ ಗುಜರಾತ್‌ಗೆ ಬಂದಿದ್ದಾರೆ. ವಿಮಾನ ನಿಲ್ದಾಣದಿಂದ ಅಹಮದಾಬಾದ್‌ನ ಬಿಜೆಪಿ ಕಚೇರಿ ‘ಕಮಲಂ’ವರೆಗೆ 9 ಕಿಮೀ ರೋಡ್ ಶೋ ನಡೆಸಲಾಯಿತು. ಮೋದಿ ಅವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ 50 ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಇಲ್ಲಿ 4 ಲಕ್ಷ ಜನ ಸೇರಿದ್ದರು ಎಂದು ಅಂದಾಜಿಸಲಾಗಿದೆ.

Related Video