ಹಾವುಗಳ ಜಾತ್ರೆ: ಕಾರ್ಕೋಟಕ ಸರ್ಪಗಳ ಜೊತೆ ಆಟ, ಈ ಜನರಿಗೆ ಚೆಲ್ಲಾಟ

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ

First Published Jul 21, 2022, 10:29 PM IST | Last Updated Jul 21, 2022, 10:29 PM IST

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ. ಹಬ್ಬದ ನೆಪದಲ್ಲಿ ಹಾವುಗಳಿಗೆ ಕೊಡಬಾರದ ಚಿತ್ರಹಿಂಸೆ ಕೊಡ್ತಿರ್ತಾರೆ. ಆದರೂ ಹಾವುಗಳು ವಿಷಕಕ್ಕೊಲ್ಲ. ಬಿಹಾರದ ಸಮಸ್ತಿಪುರದಲ್ಲಿ ಶ್ರಾವಣ ಮಾಸದ ಐದನೇ ದಿನದಂದು ನಾಗಪಂಚಮಿ ಹಬ್ಬದಲ್ಲಿ ಈ ವಿಶೇಷ ಆಚರಣೆ ನಡೆಯುತ್ತದೆ. 300 ವರ್ಷಗಳಿಂದ ಇಲ್ಲಿ ನಾಗಲೋಕದ ವಿಶೇಷ ಜಾತ್ರೆ ನಡೀತಾ ಇದೆ. ಈ ವೇಳೆ ವಿಷಪೂರಿತ ಹಾವನ್ನು ಕೈ ಮತ್ತು ಭುಜದ ಮೇಲೆ ಹೊತ್ತುಕೊಂಡು ಜನರು ಕುಣಿದಿದ್ದಾರೆ. ಇವರಲ್ಲಿ ಯಾರಿಗೂ ಹಾವು ಕಚ್ಚುವ ಭಯವಿರಲಿಲ್ಲ. ಹಾವುಗಳು ಕೂಡ ಅವರನ್ನು ಕಚ್ಚಲಿಲ್ಲ. ಸ್ನೇಹಿತರಂತೆ ಜನರ ಕೊರಳಿಗೆ ಹಾವುಗಳನ್ನು ಸುತ್ತಿಕೊಂಡಿದ್ದಾರೆ. ಆದರೂ ಈ ಹಾವುಗಳು ಯಾರನ್ನು ಬಲಿಪಡೆದಿಲ್ಲ.  ಇದು ವಿಜ್ಞಾನಕ್ಕೂ ಸವಾಲಾಗಿದೆ. ಈ ಬಗ್ಗೆ ಡಿಟೇಲ್ಡ್‌ ಸ್ಟೋರಿ ಇಲ್ಲಿದೆ.