ಜೆಡಿಎಸ್-ಬಿಜೆಪಿಗೆ ಆಘಾತ: ದೇವೇಗೌಡರ ತವರು ಜಿಲ್ಲೆಯಲ್ಲೇ ಮೈತ್ರಿಗೆ ವಿರೋಧ ?
ಕುಟುಂಬ ರಾಜಕಾರಣದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ
ಕುಟುಂಬ ರಾಜಕಾರಣ ಬೇರು ಸಹಿತ ಕಿತ್ತು ಹಾಕಬೇಕು
ಜೆಡಿಎಸ್ ವಚನ ಭ್ರಷ್ಟ ಪಕ್ಷ ಎನ್ನುತ್ತಿದ್ದರು ಬಿಜೆಪಿಯವರು
ಹಾಗಾದ್ರೆ ಈಗ ಜೆಡಿಎಸ್‌ನವರು ವಚನಬದ್ಧರಾಗಿಬಿಟ್ಟರಾ..?
ಬಿಜೆಪಿ ಮುಖಂಡ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಒಂದಾದ ಜೆಡಿಎಸ್(JDS) ಮತ್ತು ಬಿಜೆಪಿಗೆ(BJP) ಆಘಾತ ಉಂಟಾಗಿದೆ. ಹಳೆ ಶತ್ರುಗಳ ಹೊಸ ಮಿತ್ರತ್ವಕ್ಕೆ ಅಪಸ್ವರ ಹೆಚ್ಚಾಗುತ್ತಿದೆ. ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳಲ್ಲಿ ಮೈತ್ರಿಗೆ ವಿರೋಧ ವ್ಯಕ್ತವಾಗುತ್ತಿದೆ. ದೇವೇಗೌಡರ(HD Devegowda) ತವರು ಜಿಲ್ಲೆಯಲ್ಲೇ ಮೈತ್ರಿಗೆ ವಿರೋಧವಿದೆ ಎಂಬ ಮಾತು ಕೇಳಿಬರುತ್ತಿದೆ. ಮೈತ್ರಿ ವಿರುದ್ಧ ಬಿಜೆಪಿ ನಾಯಕ ಎ.ಟಿ ರಾಮಸ್ವಾಮಿ ಧ್ವನಿ ಎತ್ತಿದ್ದಾರೆ. ಮೈತ್ರಿ ವಿರುದ್ಧ ಸಿಡಿದೆದ್ದು ಬಿಜೆಪಿಗೆ ಗುಡ್ ಬೈ ಹೇಳ್ತಾರೆ ಎನ್ನಲಾಗ್ತಿದೆ. ಶತ್ರುವಿನ ಶತ್ರು ಮಿತ್ರರಾಗಬಹುದು ಎಂದಿದ್ಯಾಕೆ ಎಟಿಆರ್..? ಕಾಂಗ್ರೆಸ್ ನತ್ತ ಮುಖ ಮಾಡ್ತಾರಾ ಎ.ಟಿ.ರಾಮಸ್ವಾಮಿ..? ಜೆಡಿಎಸ್ ತೊರೆದು ಎ.ಟಿ. ರಾಮಸ್ವಾಮಿ(AT Ramaswamy) ಬಿಜೆಪಿ ಸೇರಿದ್ದರು. ಕುಟುಂಬ ಹಿತಕ್ಕಾಗಿ JDS ಅವಕಾಶ ವಾದಿ ರಾಜಕಾರಣ ಮಾಡುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಅಧಿಕಾರಕ್ಕಾಗಿ ವಿರೋಧಿಗಳು ಹೊಂದಾಣಿಕೆ ದುರ್ದೈವ. ನೀತಿ ನಿಯಮ ಸಿದ್ಧಾಂತ ಬಲಿಕೊಟ್ಟು ರಾಜಕೀಯ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಎ.ಟಿ.ರಾಮಸ್ವಾಮಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: CWRC ಆದೇಶಕ್ಕೂ ತಮಿಳುನಾಡು ಸರ್ಕಾರದ ಅಪಸ್ವರ: ಎರಡೂ ರಾಜ್ಯಗಳ ವಾದವೇನು ?