Asianet Suvarna News Asianet Suvarna News

Omicron Variant: ಒಮಿಕ್ರೋನ್‌ಗೆ ಕೊಲ್ಲುವ ಶಕ್ತಿ ಕಡಿಮೆ, ನಿರ್ಲಕ್ಷ್ಯ ಬೇಡ, ಎಚ್ಚರಿಕೆ ಅಗತ್ಯ

ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುತ್ತದೆ, ಲಸಿಕೆಗೂ ಬಗ್ಗಲ್ಲ ಎಂದು ಒಂದು ವಾದವಾದರೆ, ಇನ್ನೊಂದೆಡೆ ಇದಕ್ಕೆ ಕೊಲ್ಲುವ ಶಕ್ತಿ ಕಡಿಮೆಯಿದೆ ಎಂದು ತಜ್ಞರು ಹೇಳುತ್ತಾರೆ. 
 

ಬೆಂಗಳೂರು (ಡಿ. 06): ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುತ್ತದೆ, ಲಸಿಕೆಗೂ ಬಗ್ಗಲ್ಲ ಎಂದು ಒಂದು ವಾದವಾದರೆ, ಇನ್ನೊಂದೆಡೆ ಇದಕ್ಕೆ ಕೊಲ್ಲುವ ಶಕ್ತಿ ಕಡಿಮೆಯಿದೆ ಎಂದು ತಜ್ಞರು ಹೇಳುತ್ತಾರೆ. 

ಓಮಿಕ್ರಾನ್ ರೂಪಾಂತರದ ಹರಡುವಿಕೆಯ ವೇಗ ಅಧಿಕವಾಗಿದೆ ಎಂದು ನಂಬಲಾಗಿರುವುದರಿಂದ ಭಾರತವು ಮೂರನೇ COVID-19 ತರಂಗಕ್ಕೆ ಸಿದ್ಧವಾಗಬೇಕು ಎಂದು AIIMS ನ ಕಾರ್ಯನಿರ್ವಾಹಕ ನಿರ್ದೇಶಕ ಬೀಬಿನಗರ ಹೇಳಿದ್ದಾರೆ. ಆದರೂ ರೂಪಾಂತರ ಒಮಿಕ್ರೋನ್‌ಗೆ(Omicron) ಕಡಿಮೆ ಕೊಲ್ಲುವ ಶಕ್ತಿ ಇದೆ. ಇದು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರಬಹುದು ಎಂದು ಡಾ ವಿಕಾಸ್ ಭಾಟಿಯಾ ಹೇಳಿದ್ದಾರೆ. 

Omicron Variant:ಒಮಿಕ್ರಾನ್ ಭೀತಿಗೆ ಅಂಗಾತ ಬಿದ್ದ ಕಚ್ಛಾತೈಲ ದರ

ಕೋವಿಡ್ 3 ನೇ ಅಲೆಗೆ ಒಮಿಕ್ರೋನ್ ರೂಪಾಂತರಿಯೇ ಕಾರಣವಾಗಲಿದೆ. ಆದರೆ ಈ ಅಲೆ ಮೃದುವಾಗಿರಲಿದೆ. ಕೋವಿಡ್ 2 ನೇ ಅಲೆಯಷ್ಟು ಮಾರಕವಾಗಿರುವುದಿಲ್ಲ' ಎಂದು ಐಐಟಿ ಕಾನ್ಪುರ ಪ್ರಾಧ್ಯಾಪಕ ಮಣೀಂದ್ರ ಅಗರ್‌ವಾಲ್ ಹೇಳಿದ್ದಾರೆ. 

Video Top Stories