Asianet Suvarna News Asianet Suvarna News

ಒಡಿಶಾ ರೈಲು ದುರಂತ ಹುಟ್ಟಿಸಿದೆ ಅನುಮಾನ: ಪುಟ್ಟ ಗಾಯವೂ ಇಲ್ಲದೇ ಸಾವು ಹೇಗಾಯ್ತು?

ಒಡಿಶಾ ರೈಲು ದುರಂತ ಹತ್ತಾರು ಅನುಮಾನಗಳನ್ನು ಹುಟ್ಟುಹಾಕಿದೆ. ಪ್ರಾರ್ಥಮಿಕ ತನಿಖೆ ನಂತರ ಈ ಅನುಮಾನಗಳು ಹುಟ್ಟಿಕೊಂಡಿವೆ.  ರೈಲು ಅಪಘಾತಕ್ಕೆ ಕಾರಣವೇನು ಅನ್ನೋ ಕುರಿತು ಹೇಗೆ ಅನುಮಾನಗಳು ಹುಟ್ಟಿಕೊಂಡಿವೆಯೋ ಅದೇ ರೀತಿ ರೈಲು ದುರಂತದಲ್ಲಿ ಆದ ಸಾವುಗಳಲ್ಲಿ ಕೆಲವು ಸಾವುಗಳು ಅನುಮಾನಗಳನ್ನು ಹುಟ್ಟು ಹಾಕಿವೆ.

ಒಡಿಶಾ ರೈಲು ದುರಂತ ಹತ್ತಾರು ಅನುಮಾನಗಳನ್ನು ಹುಟ್ಟುಹಾಕಿದೆ. ಪ್ರಾರ್ಥಮಿಕ ತನಿಖೆ ನಂತರ ಈ ಅನುಮಾನಗಳು ಹುಟ್ಟಿಕೊಂಡಿವೆ. ರೈಲು ಅಪಘಾತಕ್ಕೆ ಕಾರಣವೇನು ಅನ್ನೋ ಕುರಿತು ಹೇಗೆ ಅನುಮಾನಗಳು ಹುಟ್ಟಿಕೊಂಡಿವೆಯೋ ಅದೇ ರೀತಿ ರೈಲು ದುರಂತದಲ್ಲಿ ಆದ ಸಾವುಗಳಲ್ಲಿ ಕೆಲವು ಸಾವುಗಳು ಅನುಮಾನಗಳನ್ನು ಹುಟ್ಟು ಹಾಕಿವೆ. ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ ಆಗಿದೆ. ಆದರೆ ವಿಚಿತ್ರ ಎನಿಸಿದ್ದು, ಇವರಲ್ಲಿ 40 ಜನರ ಸಾವು,  40ಕ್ಕೂ ಹೆಚ್ಚು ಮೃತದೇಹಗಳಲ್ಲಿ ಪುಟ್ಟ ಗಾಯವಿಲ್ಲ. ರಕ್ತ ಚೆಲ್ಲಿಲ್ಲ. ಹಾಗಿದ್ರೆ ಆ ಸಾವುಗಳಿಗೆ ನಿಜ ಕಾರಣವಾದ್ರು ಏನು..? 40 ಸಾವುಗಳ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ಹಿರಿಯ ಪೊಲೀಸ್ ಅಧಿಕಾರಿ ಇದೆಲ್ಲದರ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.