ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘದ ವಿರುದ್ಧ ಕೇಳಿಬಂದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮುಸ್ಲಿಮರು, ಲವ್ ಜಿಹಾದ್ ಮತ್ತು ಹಿಂದೂ ರಾಷ್ಟ್ರದ ಪರಿಕಲ್ಪನೆಯ ಕುರಿತು ಅವರು ನೀಡಿದ ಹೇಳಿಕೆಗಳು ಸಂಚಲನ ಸೃಷ್ಟಿಸಿವೆ.

Share this Video
  • FB
  • Linkdin
  • Whatsapp

ನಮಸ್ತೆ ವೀಕ್ಷಕರೇ, ಇತ್ತೀಚಿಗೆ ಅತಿ ದೊಡ್ಡ ಮಟ್ಟದಲ್ಲಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಸಂಗತಿ ಅಂದ್ರೆ ಅದು ಆರ್‌ಎಸ್ಎಸ್ ಹಾಗೂ ಸರ್ಕಾರ ಮಧ್ಯೆ ನಡೆದ ಸಂಘರ್ಷ. ರಾಷ್ಟ್ರೀಯ ಸ್ವಯಂ ಸೇವಕ ಸಂಘ-ಅದು ರಾಷ್ಟ್ರ ಹಿತಕ್ಕಾಗಿ ಜೀವಿತವನ್ನೇ ಒತ್ತೆ ಇಟ್ಟವರ ಸಂಘ ಅಂತ ಹೇಳಿಕೊಳ್ಳುತ್ತೆ.. ಅವರ ಏಕಮಾತ್ರ ಉದ್ದೇಶ ಏನು ಅಂದ್ರೆ, ಹಿಂದೂಸ್ತಾನ ಹಿಂದೂರಾಷ್ಟ್ರವಾಗೋದು ಅಂತ ಹೇಳ್ತಾರೆ.. ಹಾಗಾದ್ರೆ, ಅವರ ಗುರಿಗೆ ಎದುರಾಗಿರೋ ಸವಾಲೇನು? ಈ ವಿಚಾರದಲ್ಲಿ ಮೋಹನ್ ಭಾಗವತ್ ಅವರು ಕೊಟ್ಟ ಸೆನ್ಸೇಷನಲ್ ಸ್ಟೇಟ್ಮೆಂಟ್ ಏನು? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ, ಒಂದಷ್ಟು ಪ್ರಶ್ನೆಗಳನ್ನ ಕೇಳ್ತಾ, ಅದರ ಒಳಗುಟ್ಟು ಬಯಲು ಮಾಡ್ತೀವಿ ಅನ್ನೋ ಹಾಗೆ, ಕೆಲವರು ಪ್ರಶ್ನೆ ಕೇಳಿದ್ರು.. ಹಾಗೆ ಕೇಳಿದ ಪ್ರಶ್ನೆಗಳು, ಕೇಳದೇ ಉಳಿದಿದ್ದ ಪ್ರಶ್ನೆಗಳು ಎಲ್ಲವಕ್ಕೂ ಈಗ ಉತ್ತರ ಸಿಕ್ಕಿದೆ.. ಅದೇನು ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

Related Video