News Hour: ಭರವಸೆ ಬಜೆಟ್..ನೋ ಆಫರ್..ಬಟ್ ಬಂಪರ್! ಚುನಾವಣಾ ಘೋಷಣೆಗಳಿಲ್ಲದ ಮೋದಿ ಬಜೆಟ್ !
ಚುನಾವಣೆ ವೇಳೆ ಮೋದಿ ಸರ್ಕಾರದ ಭರವಸೆ ಬಜೆಟ್!
ಗ್ಯಾರಂಟಿ ಯೋಜನೆಗಳಿಲ್ಲ,ಉಚಿತ ಘೋಷಣೆಗಳು ಇಲ್ಲ
ಯಾವುದೇ ವಿನಾಯಿತಿ ಘೋಷಿಸದ ಮೋದಿ ಸರ್ಕಾರ!
ಪ್ರಧಾನಿ ಮೋದಿ ಸರ್ಕಾರ 10ನೇ ವರ್ಷದ ಕೊನೆಯ ಮಧ್ಯಂತರ ಬಜೆಟ್(Interim Budget) ಮಂಡಿಸಲಾಗಿದೆ. 6ನೇ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಬಜೆಟ್ ಮಂಡಿಸಿದ್ದು, ಆದಾಯ ತೆರಿಗೆ ಮಿತಿ, ಆದಾಯ ತೆರಿಗೆ ನೀತಿ, ಸೀಮಾ ಸುಂಕ, ಆಮದು ಸುಂಕ, ಸೆಸ್‌ಗಳಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಚುನಾವಣೆ(Election) ವೇಳೆ ಜನಪ್ರಿಯ ಘೋಷಣೆಗಳ ಸಂಪ್ರದಾಯ ಮುರಿದಿದ್ದು, ಭರವಸೆ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ(BJP) ನಾಯಕರು ವಿಕಾಸಕಾರಿ ಬಜೆಟ್ ಎಂದು ಸ್ವಾಗತಿಸಿದ್ರೆ, ಕಾಂಗ್ರೆಸ್ ವಿನಾಶಕಾರಿ ಬಜೆಟ್ ಎಂದು ಕಿಡಿಕಾರಿದೆ. ಇನ್ನೂ ದೆಹಲಿಯಲ್ಲಿ ಮಾತಾಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್(DK Suresh), ಕೇಂದ್ರ ಸರ್ಕಾರ ದಕ್ಷಿಣ ಭಾರತದ ಹಣ ಪಡೆದು ಉತ್ತರ ಭಾರತಕ್ಕೆ ನೀಡ್ತಿದೆ. ಈ ಅನುದಾನ ಅನ್ಯಾಯ ಹೀಗೆ ಮುಂದುವರಿದಿದ್ರೆ ದಕ್ಷಿಣ ಭಾರತವನ್ನ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಡಿಕೆ ಸುರೇಶ್ ಹೇಳಿಕೆಗೆ ಬಿಜೆಪಿ ನಾಯಕರು ಕೊತಕೊತ ಕುದಿಯುತ್ತಿದ್ದಾರೆ.ರಾಹುಲ್ ಗಾಂಧಿ ಭಾರತ್ ಜೋಡೋ ಅಂತಾ ಓಡಾಡಿದ್ರೆ, ಅವರದ್ದೇ ಕಾಂಗ್ರೆಸ್ ಪಕ್ಷದ ಸಂಸದ ಡಿಕೆ ಸುರೇಶ್, ದೇಶ ಒಡೆಯುವ ಮಾತುಗಳನ್ನ ಆಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಶತ್ರುಗಳ ಕಾಟವೇ..ಸಂಹಾರಕ್ಕೆ ಇಂದು ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡಿಸಿ..