Narendra Modi: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳಿಸಲಿದೆ : ಸಂಸತ್‌ನಲ್ಲಿ ಮೋದಿಯಿಂದ 2ನೇ ಅವಧಿ ಕೊನೆ ಭಾಷಣ

ಸಂಸತ್ನಲ್ಲಿ ಪ್ರಧಾನಿ ಭಾಷಣ...ಮತ್ತೆ ನಮ್ಮದೇ ಸರ್ಕಾರ ಎಂದ ಮೋದಿ
ಈ ಬಾರಿ ಎನ್ಡಿಎ ಮೈತ್ರಿಕೂಟಕ್ಕೆ 400ಕ್ಕೂ ಹೆಚ್ಚು ಸ್ಥಾನ ಎಂದ ಪ್ರಧಾನಿ
ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಗಳಿಸಲಿದೆ ಎಂದು ಮೋದಿ ವಿಶ್ವಾಸ

Share this Video
  • FB
  • Linkdin
  • Whatsapp

ಸಂಸತ್‌ನಲ್ಲಿ ಪ್ರಧಾನಿ ಮೋದಿ(Narendra Modi) ಭಾಷಣ ಮಾಡಿದ್ದು, ಮತ್ತೆ ನಮ್ಮದೇ ಸರ್ಕಾರ ಬರಲಿದೆ ಎಂದಿದ್ದಾರೆ. ಬಾರಿ ಎನ್‌ಡಿಎ(NDA) ಮೈತ್ರಿಕೂಟಕ್ಕೆ 400ಕ್ಕೂ ಹೆಚ್ಚು ಸ್ಥಾನ ಬರಲಿದೆ. ಬಿಜೆಪಿ(BJP) ಏಕಾಂಗಿಯಾಗಿ 370 ಸ್ಥಾನ ಗಳಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸತ್‌ನಲ್ಲಿ ಮೋದಿಯಿಂದ 2ನೇ ಅವಧಿ ಕೊನೆಯ ಭಾಷಣ ಮಾಡಲಾಗಿದೆ. ಮೂರನೇ ಅವಧಿಗೂ ನಮ್ಮದೇ ಸರ್ಕಾರ ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದ್ದಾರೆ. ಕಾಂಗ್ರೆಸ್‌ನ(Congress) ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಬಗ್ಗೆ ಮೋದಿ ಟೀಕೆ ಮಾಡಿದ್ದಾರೆ. ಯುಪಿಎ ಅವಧಿಯ 10 ವರ್ಷಗಳ ಆಡಳಿತ ಪ್ರಸ್ತಾಪಿಸಿದ ಮೋದಿ, ಬಿಜೆಪಿ ಆಡಳಿತದ 10 ವರ್ಷಗಳನ್ನ ಯುಪಿಎ ಜತೆ ಹೋಲಿಸಿದರು. ಕಾಂಗ್ರೆಸ್‌ನಿಂದ ದೇಶದ ಅಭಿವೃದ್ಧಿ ವೇಗ ಕುಂಠಿತ ಎಂದು ವಾಗ್ದಾಳಿ ನಡೆಸಿದರು. ಭಾರತ 3ನೇ ಆರ್ಥಿಕ ರಾಷ್ಟ್ರವಾಗಲು 30 ವರ್ಷ ಬೇಕು ಅಂದಿದ್ರಿ. ನನ್ನ 3ನೇ ಅವಧಿಯಲ್ಲೇ ಭಾರತ 3ನೇ ಆರ್ಥಿಕ ಶಕ್ತಿಯಾಗಲಿದೆ. 30 ವರ್ಷ ಬೇಡ..ಇದು ಮೋದಿಜೀ ಗ್ಯಾರಂಟಿ ಎಂದು ಗುಡುಗಿದರು.

ಇದನ್ನೂ ವೀಕ್ಷಿಸಿ:  ಲೋಕಸಭೆಯಲ್ಲಿ ಚರ್ಚೆಯಾದ ಕರ್ನಾಟಕದ 73 ಸಾವಿರ ಕೋಟಿ ಅನುದಾನ ಬಾಕಿ!

Related Video