ಬೆಚ್ಚಿ ಬೀಳಿಸುತ್ತೆ ಇಂಡಿಯಾ 2047 ಪುಸ್ತಕ: ಮಲೆನಾಡ ಮಡಿಲಲ್ಲಿ ತಣ್ಣಗೆ ಫ್ರಿಬ್ಲಾಸ್ಟ್

ದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನ್ನ ಇತಿಹಾಸದಲ್ಲೇ ಮಾಡಿದ ಮೆಗಾ ಆಪರೇಷನ್‌ನಿಂದ ಹಲವು ಸ್ಪೋಟಕ ಮಾಹಿತಿಗಳು ಹೊರ ಬಂದಿವೆ. 15 ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಎಸ್‌ಡಿಪಿಐ ಪಿಎಫ್‌ಐ ನಾಯಕರ ಮನೆ ಕಚೇರಿಗಳಲ್ಲಿ ತಲಾಶ್ ಮಾಡಿ ಹಲವರನ್ನು ಬಂಧಿಸಿದ್ದರು. 

Share this Video
  • FB
  • Linkdin
  • Whatsapp

ಶಿವಮೊಗ್ಗ/ನವದೆಹಲಿ: ದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನ್ನ ಇತಿಹಾಸದಲ್ಲೇ ಮಾಡಿದ ಮೆಗಾ ಆಪರೇಷನ್‌ನಿಂದ ಹಲವು ಸ್ಪೋಟಕ ಮಾಹಿತಿಗಳು ಹೊರ ಬಂದಿವೆ. 15 ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಎಸ್‌ಡಿಪಿಐ ಪಿಎಫ್‌ಐ ನಾಯಕರ ಮನೆ ಕಚೇರಿಗಳಲ್ಲಿ ತಲಾಶ್ ಮಾಡಿ ಹಲವರನ್ನು ಬಂಧಿಸಿದ್ದರು. ದಾಳಿ ಖಂಡಿಸಿ ಬೀದಿಗಿಳಿದವರ ಬಾಯಿಯಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹೊರ ಬಂದಿತ್ತು. ಪಿಎಫ್‌ಐ ದೇಶ ವಿರೋಧಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಸಂಘಟನೆಯಾಗಿದ್ದು ಶಾಂತಿ ಭಂಗ ಮಾಡಲು, ಉಗ್ರ ಚಟುವಟಿಕೆಗಳಿಗೆ ಪ್ರೇರಣೆ ಮಾಡಲು ಎತ್ತಿದ ಕೈ. ಶಿವಮೊಗ್ಗದಲ್ಲಿ ಇಂತಹ ಉಗ್ರರ ಜಾಡು ಹಿಡಿದು ಹೊರಟ ಪೊಲೀಸರಿಗೆ ಒಂದೊಂದೇ ಸ್ಪೋಟಕ ಮಾಹಿತಿಗಳು ಸಿಕ್ಕಿದ್ದವು. ಬಂಧಿತನೋರ್ವ ವಿಚಾರಣೆ ವೇಳೆ ಬಾಯ್ಬಿಟ್ಟ ಸತ್ಯ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಶಿವಮೊಗ್ಗ ಮಂಗಳೂರಿನಲ್ಲಿ ಉಗ್ರರು ಫ್ರಿ ಬ್ಲಾಸ್ಟ್ ನಡೆಸಿದ್ದು ಬೆಳಕಿಗೆ ಬಂದಿತ್ತು. ಸೆರೆ ಸಿಕ್ಕ ಶಂಕಿತರು ಏನೆನೆಲ್ಲಾ ಬಾಯ್ಬಿಟ್ಟಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ. 

Related Video