ಉಪಚುನಾವಣಾ ಅಖಾಡದಲ್ಲಿ ಯಾರಿಗೆ ಟಿಕೆಟ್? ಹೊಸ ಜೋಡೆತ್ತುಗಳು!
* ಸಿಂದಗಿ, ಹಾನಗಲ್ ಉಪಚುನಾವಣೆ ಅಖಾಡ ಹೇಗಿದೆ?
* ಬೆಂಗಳೂರಿಗೆ ಬಂತು ಎಲೆಕ್ಟ್ರಿಕ್ ಬಸ್
* ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡ್ತೆವೆ
* ನಿಲ್ಲದ ತಾಲೀಬಾನ್ ಹೇಳಿಕೆ ಪ್ರತಿಕ್ರಿಯೆಗಳು
ಬೆಂಗಳೂರು(ಸೆ. 30) ಘೋಷಣೆಯಾಗಿರುವ ಉಪಚುನಾವಣೆಗೆ(Karnataka By poll) ಅನುಕಂಪದ ಆಧಾರದಲ್ಲಿ ಟಿಕೆಟ್ ಕೊಡುವುದು ಬೇಡ ಎನ್ನುವ ವಾದ ಎದ್ದಿದೆ. ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಜನರ ಮುಂದೆ ನಿಲ್ಲಿಸುವ ಕೆಲಸ ಮಾಡುತ್ತಿವೆ. ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ಗುದ್ದಾಟ ಶುರುವಾಗಿದ್ದು, ಸಿದ್ದರಾಮಯ್ಯ ಬಣಕ್ಕೆ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಪಂಜಾಬ್ ಕಾಂಗ್ರೆಸ್‌ನಲ್ಲಿನ(Congress) ಕೋಲಾಹಲ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಒಂದು ಕ್ಲಿಯರ್ ಚಿತ್ರಣ ಸಿಕ್ಕಿದೆ. ವಿದ್ಯುತ್ ಚಾಲಿತ ಬಸ್ ಬಿಎಂಟಿಸಿ(BMTC) ಯನ್ನು ಸೇರ್ಪಡೆಯಾಗಿದೆ. ಪರಿಸರ ಸ್ನೇಹಿ ಹೆಜ್ಜೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಏನಿದರ ವಿಶೇಷ? ಆರ್‌ಎಸ್‌ಎಸ್ ಅನ್ನು ತಾಲಿಬಾನಿಗಳಿಗೆ ಹೋಲಿಕೆ ಮಾಡಿದ್ದ ಮಾಜಿ ಸಿದ್ದರಾಮಯ್ಯನವರ ಮಾತಿಗೆ ಪ್ರತಿಕ್ರಿಯೆಗಳು ಇನ್ನೂ ನಿಲ್ಲುತ್ತಿಲ್ಲ. ನಾವಿಬ್ಬರೂ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಜೆಡಿಎಸ್ ಹೊಸ ರೀತಿಯಲ್ಲಿ ಯುವ ಶಕ್ತಿಯ ಸಂಘಟನೆಗೆ ಮುಂದಾಗಿದೆ.