Asianet Suvarna News Asianet Suvarna News

'ಇತರ ಪಕ್ಷಗಳ ಹಾಲಿ ಹಾಗೂ ಮಾಜಿ ಶಾಸಕರು ಶೀಘ್ರ ಕಾಂಗ್ರೆಸ್‌ಗೆ'

  •   ಸಾಕಷ್ಟು ಇತರ ಪಕ್ಷಗಳ ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ 
  • ಈಗಾಗಲೆ  ಕೆಪಿಸಿಸಿ ಅಧ್ಯ ಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಭೇಟಿ
Soon Many Leaders will Join Congress Says  G Parameshwar snr
Author
Bengaluru, First Published Sep 30, 2021, 4:20 PM IST
  • Facebook
  • Twitter
  • Whatsapp

ತುಮಕೂರು (ಸೆ.30):  ಜಿಲ್ಲೆಯಲ್ಲಿ ಸಾಕಷ್ಟು ಇತರ ಪಕ್ಷಗಳ ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ (Congress) ಪಕ್ಷಕ್ಕೆ ಬರುವವರಿದ್ದು, ಮಾಜಿ ಶಾಸಕ ಸುರೇಶ್‌ಗೌಡರ (Suresh Gowda) ಪಕ್ಷ ಸೇರುವ ವದಂತಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಶಾಸಕ ಡಾ.ಜಿ.ಪರಮೇಶ್ವರ್ (Dr.G.Parameshwar) ತಿಳಿಸಿದರು. 

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷ ಸೇರಲು ಸಿದ್ದರಿದ್ದಾರೆ, ಈಗಾಗಲೆ ಅವರುಗಳು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಸಿಎಲ್‌ಪಿ (CLP) ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿರಬಹುದು, ರಾಜ್ಯದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಇತರ ಪಕ್ಷಗಳಿಂದ ಶಾಸಕರುಗಳು ಮತ್ತು ವಿಧಾನ ಪರಿಷತ್ ಸದಸ್ಯರು, ಮುಂಚೂಣಿ ಮುಖಂಡರು ಪಕ್ಷಕ್ಕೆ ಸೇರಲಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಸ್ವಾಗತವಿದ್ದರು ಸಹ ಇತರ ಪಕ್ಷಗಳಿಂದ ಬರುವವರು ಆಯಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮಾನ ಮನಸ್ಥಿತಿಯಲ್ಲಿ ಹೋಗಲೇ ಬೇಕಾಗುತ್ತದೆ, ಇದು ಮುಂಬರುವ ವಿಧಾನ ಸಭಾ ಚುನಾವಣೆಯ ಕ್ಷೇತ್ರದ ಅಭ್ಯರ್ಥಿಯ ಮಾನದಂಡದಲ್ಲೂ ಸಹ ಮುಖ್ಯವಾಗಿರುತ್ತದೆ, ಆದರೆ ಪತ್ರಕರ್ತರು ಕೇಳಿದ ಮಾಜಿ ಶಾಸಕ ಸುರೇಶ್ ಗೌಡರ ಕಾಂಗ್ರೆಸ್ ಸೇರ್ಪಡೆ ವದಂತಿ ನನಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದರು. 

'20 ಕಾಂಗ್ರೆಸ್‌ ಹಾಲಿ ಶಾಸಕರು ಶೀಘ್ರದಲ್ಲೇ ಬಿಜೆಪಿಗೆ' : ಸ್ಫೋಟಕ ಪಕ್ಷಾಂತರ ಮಾಹಿತಿ?

ಸಿಎಂ ಭರವಸೆ: ಎತ್ತಿನಹೊಳೆ ಯೋಜನೆ ರೈತರಿಗೆ ಸಮಾನಂತರ ಭೂ ಪರಿಹಾರ ನೀಡುವುದು ಮತ್ತು ಹಿಂದಿನ ಯೋಜನೆಯಂತೆ ನೀರು ನಿಲುಗಡೆ ಸೇರಿ ದಂತೆ ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿ ಬಸವ ರಾಜು ಬೊಮ್ಮಯಿ (Basavaraj Bommai) ಅವರು ಸಂಬಂಧಪಟ್ಟ ಮಂತ್ರಿ ಮತ್ತು ಅಧಿಕಾರಿಗಳೊಂದಿಗೆ ಹಾಗೂ ಸ್ಥಳೀಯ ಶಾಸ ಕರೊಂದಿಗೆ ಸಭೆ ಸೇರಿಸಿ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. 

ಭೂಮಿ ಕಳೆದುಕೊಳ್ಳುವಂತ ರೈತರಿಗೆ ಸಮಾನ ಪರಿಹಾರ ನೀಡುವುದು ಸರ್ಕಾರ ಗಳ ಕರ್ತವ್ಯ ಎಂದರು, ಹಿಂದಿನ ಕಾಂಗ್ರೆಸ್ ಮತ್ತು ನಂತರದ ಸಮ್ಮಿಶ್ರ ಸರ್ಕಾರದಲ್ಲಿ ಕೊರಟಗೆರೆ ತಾಲೂಕಿಗೆ ನೂತನವಾಗಿ ಪ್ರತ್ಯೇಕ ಎಪಿಎಂಸಿ (APMC)  ಯನ್ನು ಮಂಜೂರು ಮಾಡಿಸಿ ಅಭಿವೃದ್ಧಿ ಗೊಳಿಸಲಾಗಿತ್ತು, ಆದರೆ ಇಂದಿನ ಬಿಜೆಪಿ ಸರ್ಕಾರ ಕೊರಟಗೆರೆ ತಾಲೂಕಿನ ಎಪಿಎಂಸಿ ಯನ್ನು ತುಮಕೂರಿಗೆ ಮತ್ತೆ ವಿಲೀನ ಮಾಡಿದೆ, ನನಗೆ ಬಂದ ಮಾಹಿತಿ ಪ್ರಕಾರ ಈ ವಿಲೀನವನ್ನು ತಾಂತ್ರಿಕವಾಗಿ ಪರಿಶೀಲಿಸಿ ಮಾಡದೆ ಯಾರೋಬ್ಬರ ರಾಜಕೀಯ ಒತ್ತಡಕ್ಕಾಗಿ ವಿಲೀನವಾಗಿದೆ, ಇದಕ್ಕೆ ಸಂಪೂರ್ಣ ಉದಾಹರಣೆ ಎಪಿಎಂಸಿ (APMC) ನಾಮ ನಿರ್ದೇಶನದಲ್ಲಿ ಕೊರಟಗೆರೆ ತಾಲೂಕಿನಿಂದ ಯಾರೋಬ್ಬರೂ ಅಗಿಲ್ಲ, ಇದರ ವಿರುದ್ದ ಸಂಬಂದಪಟ್ಟ ಸಚಿವರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಒತ್ತಡ ಹಾಕಿದ್ದು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದರು.

ತಪ್ಪಿದಲ್ಲಿ ಈ ಸಂಬಂದ ಕ್ಷೇತ್ರದ ಜನತೆ ಮತ್ತು ರೈತರೊಂದಿಗೆ ಹೋರಾಟ ಮಾಡಲಾಗುವುದು ಇಲ್ಲ ವೇ ಕಾನೂನು ಸಮರವನ್ನು ಮಾಡಬೇಕಾಗುವುದು, ರಾಜ್ಯದಲ್ಲಿ ಪ್ರತಿ ತಾಲೂಕಿಗು ಎಪಿಎಂಸಿ ವ್ಯವಸ್ಥೆ ಇದೆ, ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ದಲ್ಲಿ ಬೃಹತ್ ಕುರಿಸಂತೆ ನಡೆಯುತ್ತದೆ, ಅದೇ ರೀತಿ ತಾ ಲೂಕಲ್ಲಿ ಅತಿ ಹೆಚ್ಚು ಅಡಿಕೆ, ಆಹಾರ ಧಾನ್ಯಗಳ ಕೋಟ್ಯಂತರ ವಹಿವಾಟು ನಡೆಯುತ್ತಿದೆ, ಈ ಸತ್ಯ ವನ್ನೆಲ್ಲಾ ಮರೆಮಾಚಿ ಸ್ವಾರ್ಥಕ್ಕೆ ವಿಲೀನ ಗೊಳಿಸು ವುದು ಕೆಟ್ಟ ರಾಜಕೀಯ ತೋರಿಸುತ್ತಿದೆ ಎಂದರು. 

Follow Us:
Download App:
  • android
  • ios