News Hour: ಲಸಿಕೆ ಹಾಕಿಸಿಕೊಳ್ಳದವರಿಗೆ ಶಾಕ್, ಲಾಕ್ ಡೌನ್ ಇಲ್ಲವೇ ಇಲ್ಲ
* ಒಮ್ರಿಕಾನ್ ತಡೆಗೆ ಮಹತ್ವದ ಸರಣಿ ಸಣೆ
* ಡಬಲ್ ಡೋಸ್ ಪಡೆಯದವರಿಗೆ ಉಚಿತ ಚಿಕಿತ್ಸೆ ಇಲ್ಲ, ಸೌಲಭ್ಯ ಕಟ್?
* ಲಾಕ್ ಡೌನ್ ಇಲ್ಲವೇ ಇಲ್ಲ, ವದಂತಿ ಬೇಡ
*ಇವರೆಲ್ಲ ಯಾವ ಕಾರಣಕ್ಕೆ ಲಸಿಕೆ ಬೇಡ ಅಂತಾರಪ್ಪೋ!
ಬೆಂಗಳೂರು(ಡಿ.01) ಒಮ್ರಿಕಾನ್ (Omicron) ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ(Karnataka Govt) ಮಹತ್ವದ ಸಭೆ ನಡೆಸಿದೆ. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಮಹತ್ವದ ಸಲಹೆಗಳನ್ನು ನೀಡಿದೆ. ಮುಖ್ಯಮಂತ್ರಿಗಳ (Basavaraj Bommai) ಜತೆ ವಿವರವಾಗಿ ಚರ್ಚೆ ಮಾಡಿ ಗೈಡ್ ಲೈನ್ಸ್ ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್(Dr. K Sudhakar) ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹೈ ಅಲರ್ಟ್, ಒಮಿಕ್ರಾನ್ ಗೆ ಬ್ರೇಕ್
ಲಸಿಕೆ (Vaccine) ಹಾಕಿಸಿಕೊಳ್ಳದವರನ್ನು ಹಿಡಿದು ಅವರಿಗೆ ಸ್ಥಳದಲ್ಲಿಯೇ ಲಸಿಕೆ ನೀಡಲು ಜಿಲ್ಲಾಧಿಕಾರಿಗಳೇ ಬೀದಿಗೆ ಇಳಿದಿದ್ದಾರೆ. ಜನರಲ್ಲಿನ ಗೊಂದಲ ನಿವಾರಿಸಿ ಈ ಲಸಿಕೆ ನೀಡಿಕೆ ಮಾಡಲಾಗುತ್ತಿದೆ.ವಿಧಾನ ಪರಿಷತ್ ಚುನಾವಣೆ ರಂಗೇರಿದ್ದು ನಾಯಕರ ಮಾತುಗಳು ಹಳಿ ತಪ್ಪಿದೆ. ಕುಡುಕ.. ಮಹಾಕುಡುಕ.. ಮೋಸಗಾರ, ..ಹೀಗೆ ಎಲ್ಲ ಶಬ್ದಗಳು ಉದುರಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ