Asianet Suvarna News Asianet Suvarna News

ಜಂಬೂ ಸವಾರಿಯೊಂದಿಗೆ ದಸರಾಕ್ಕೆ ತೆರೆ, ಸಿದ್ದು ಭೇಟಿ ಮಾಡಿದ ಕುಮಾರ!

Oct 16, 2021, 12:06 AM IST

ಬೆಂಗಳೂರು(ಅ. 15)   ಮೈಸೂರು ದಸರಾ(Mysuru Dasara) ವೈಭವದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಈ ಬಾರಿ ಸಹ ಜಂಬೂ ಸವಾರಿ ಎಲ್ಲರ ಕಣ್ಣು ತುಂಬಿತು.  ಕೊರೋನಾ(Coronavirus) ನಿಯಮಗಳಿದ್ದರೂ ದಸರಾ ಸಂಭ್ರಮಕ್ಕೆ ಕಡಿಮೆ ಇರಲಿಲ್ಲ. 

ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

ಡಿಕೆ ಶಿವಕುಮಾರ್  (DK Shivakumar) ತುಮಕೂರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಸೊಗಡು ಶಿವಣ್ಣ(Sogadu Shivanna) ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಡಿಕೆ ಶಿವಕುಮಾರ್ ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಈ ರೀತಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.   ಕಾಂಗ್ರೆಸ್‌ (Congress) ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನ ಬಂಗಾರಪ್ಪ ಸಹೋದರರು ಭೇಟಿಯಾಗಿದ್ದಾರೆ.  ಕುಮಾರ ಬಂಗಾರಪ್ಪ ಆಗಮನಕ್ಕೂ ಮೊದಲೇ ಸಿದ್ದರಾಮಯ್ಯ ನಿವಾಸಕ್ಕೆ ಇತ್ತೀಚೆಗಷ್ಟೇ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಮಧು ಬಂಗಾರಪ್ಪ ಅವರು ಬಂದಿದ್ದರು. ರೈತ ಪ್ರತಿಭಟನೆ(Protest) ನಡೆಯುತ್ತಿರುವ ಜಾಗದಲ್ಲಿ ಭೀಕರ ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹಿಂಸಿಸಿ ಹತ್ಯೆ ಮಾಡಲಾಗಿದೆ.