Asianet Suvarna News Asianet Suvarna News

ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

* ನಿವೃತ್ತ ಐಪಿಎಸ್ ಅಧಿಕಾರಿ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಎಗರಿಸಿದ ಸೈಬರ್ ಕಳ್ಳರು...!

* ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಗೆ  ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚನೆ

* ಪಾನ್ ಕಾರ್ಡ್ ನಂ. ಲಿಂಕ್  ಮಾಡಬೇಕೆಂದು ಕರೆ ಮಾಡಿದ್ದಾರೆ

* ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ 

Former DG and IGP Shankar Bidari falls prey to phishing scam, loses Rs 89 Thousand mah
Author
Bengaluru, First Published Oct 15, 2021, 9:01 PM IST

ಬೆಂಗಳೂರು(ಅ. 15)  ಸೈಬರ್ ಕಳ್ಳರ (Cyber Crime) ಹಾವಳಿ ಮಾತ್ರ ನಿರಂತರ.. ನಿವೃತ್ತ ಐಪಿಎಸ್ ಅಧಿಕಾರಿ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಎಗರಿಸಿದ್ದಾರೆ. ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಗೆ (Shankar Bidari) ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪಾನ್ ಕಾರ್ಡ್(PAN Card)  ನಂ. ಲಿಂಕ್  ಮಾಡಬೇಕೆಂದು ಕರೆ ಮಾಡಿದ್ದಾರೆ. ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್(Bank) ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ  ಬಳಿಕ ಮೊಬೈಲ್ ಗೆ ಬರುವ ಮೇಸೆಜ್ ನ ಓಟಿಪಿ ನಂ. ಕೇಳಿದ್ದಾರೆ. ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್ ನಲ್ಲಿದ್ದ 89 ಸಾವಿರ ಹಣ ಕಡಿತವಾಗಿದೆ.

ಸೈಬರ್ ವಂಚಕರಿಂದ ಪಾರಾಗಲು ಸರಳ ಸೂತ್ರ

ವಂಚನೆ ಹಿನ್ನಲೆ ಆಗ್ನೇಯ ವಿಭಾಗ ಸಿಇಎನ್ ಠಾಣೆಗೆ (Bengaluru Police)  ಬಿದರಿ ದೂರು ನೀಡಿದ್ದಾರೆ. ದೂರಿನ ಹಿನ್ನಲೆ ಎಫ್ ಐಆರ್(FIR)  ದಾಖಲಿಸಿಕೊಳ್ಳಲಾಗಿದೆ.  ಸೈಬರ್ ಅಪರಾಧದ ಬಗ್ಗೆ ಪೊಲೀಸ್ ಇಲಾಖೆ ಆಗಾಗ ಎಚ್ಚರಿಸುವ ಕೆಲಸ ಮಾಡಿಕೊಂಡೆ ಬಂದಿದೆ. ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ.. ಆಧಾರ್ ಅಪ್ ಡೇಟ್ ಮಾಡಬೇಕಿದೆ.. ಬಹುಮಾನ ಬಂದಿದೆ.. ಸ್ಕ್ರಾಚ್ ಕಾರ್ಡ್ ಕಳಿಸಿದ್ದೇವೆ ಸ್ಕ್ರಾಚ್ ಮಾಡಿ..  ಕೋಡ್ ಸ್ಕಾನ್ ಮಾಡಿ.. ನಿಮಗೆ ಲಾಟರಿ ತಾಗಿದೆ ಹೀಗೆ ಹಲವಾರು ನೆಪದಲ್ಲಿ ಸೈಬರ್ ವಂಚಕರು ಕರೆ ಮಾಡುತ್ತಾರೆ.. ಇಲ್ಲ ಮೊಬೈಲ್ ಗೆ ಮೆಸೇಜ್ ಕಳಿಸುತ್ತಾರೆ. ಒಂದು ಚೂರು ಜಾಗೃತೆ ತಪ್ಪಿದರೂ ಅವರ ಬಲೆಗೆ ಬೀಳಬೇಕಾಗುತ್ತದೆ. 

ನಿವೃತ್ತ ಪೊಲೀಸ್ ಮಾಹಾ ನಿರ್ದೇಶಕರಾದ ಶಂಕರ್ ಬಿದರಿ ಹೆಸರಲ್ಲಿ ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್ ಆಗಿತ್ತು. ಶಂಕರ್ ಬಿದರಿ ಅವರ  ಇ ಮೇಲ್ ಮೂಲಕ ಹ್ಯಾಕ್ ಮಾಡಿ ಹಣ ಹಾಕುವಂತೆ ಸಂದೇಶ ಕಳಿಸುತ್ತಿದ್ದ ಗ್ಯಾಂಗ್‌ನ ಮೂವರನ್ನು ಬಂಧಿಸಲಾಗಿತ್ತು. ಈಗ ಅವರಿಗೆ ವಂಚನೆಯಾಗಿದೆ.

ತುರ್ತಾಗಿ ಹಣ ನೀಡಬೇಕು. ಒಂದು ದಿನದಲ್ಲಿ ವಾಪಸ್ ನೀಡುತ್ತೇನೆ  ಎಂದು ಮೇಲ್ ಮಾಡಿ   ಹಣ ಲಪಾಟಾಯಿಸುತ್ತಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಿವೃತ್ತ ಮಹಾ ನಿರ್ದೇಶಕ ಶಂಕರ್ ಬಿದರಿ ಆಪ್ತರು ದೂರು ದಾಖಲಿಸಿದ್ದರು. ಇದನ್ನ ನಂಬಿ 25 ಸಾವಿರ ಹಣ ಹಾಕಿ ಮೋಸಕ್ಕೆ ಒಳಗಾಗಿದ್ದರು.

Follow Us:
Download App:
  • android
  • ios