News Hour : ಸಮವಸ್ತ್ರ ಧರಿಸಿ ಕಾಲೇಜಿಗೆ ಬನ್ನಿ, ವಿದ್ಯಾರ್ಥಿಗಳಿಗೆ ಹೈಕೋರ್ಟ್ ಪಾಠ
* ಶಾಲಾ-ಕಾಲೇಜು ಆರಂಭದ ವಿಚಾರದಲ್ಲಿ ಸರ್ಕಾರದ ತೀರ್ಮಾನ
*ಹೈಕೋರ್ಟ್ ಮಧ್ಯಂತರ ಆದೇಶದ ನಂತರ ನಾಯಕರು ಹೇಳಿದ್ದಿಷ್ಟು?
* ತ್ರಿಪಲ್ ತಲಾಖ್ ವಿಚಾರ ಪ್ರಸ್ತಾಪಿಸಿದ ಮೋದಿ
* ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ಬಂತಾ?
ಬೆಂಗಳೂರು(ಫೆ. 11) ಕಾಲೇಜುಗಳಲ್ಲಿ ವಿದ್ಯಾರ್ಥಿಗಳ(Students) ಹಿಜಾಬ್ (Hijab) ಹಾಗೂ ಕೇಸರಿ ಜಟಾಪಟಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಬ್ರೇಕ್ ಹಾಕಿದೆ. ಅಂತಿಮ ಆದೇಶ ನೀಡುವವರೆಗೆ ಯಾವುದೇ ಧಾರ್ಮಿಕ ಉಡುಗೆಗೆ ಅವಕಾಶ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಸರ್ಕಾರ 8, 9 ಮತ್ತು 10ನೇ ತರಗತಿ ಆರಂಭ ಮಾಡುತ್ತೇನೆ ಎಂದು ಹೇಳಿದೆ. ರಾಜಕೀಯ ನಾಯಕರು ಮಾತ್ರ ತಮ್ಮದೇ ಆದ ದಾಟಿಯಲ್ಲಿ ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಅಖಾಡಲ್ಲಿ ಇದ್ದಾರೆ. ಮುಸ್ಲಿಂ ಮಹಿಳೆಯರ ಹಕ್ಕು ಕಾಪಾಡಲು ತ್ರಿವಳಿ ತಲಾಖ್ ಗೆ ಮುಕ್ತಿ ಹಾಡಿದ್ದೇವೆ ಎಂದು ತಿಳಿಸಿದ್ದಾರೆ. ಮಂಡ್ಯದ ವಿದ್ಯಾರ್ಥಿನಿ ಅಲ್ಲಾ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದು ವೈರಲ್ ಆಗಿತ್ತು. ಆಕೆಗೆ ಮುಸ್ಲಿಂ ಸಂಘಟನೆಗಳು ಬಹುಮಾನ ಘೋಷಣೆ ಮಾಡಿವೆ ಎನ್ನುವ ಮಾತು ಇದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ