Asianet Suvarna News Asianet Suvarna News

'ಡಿಕೆಶಿ ಒಬ್ಬ ಹೋಲ್ ಸೇಲ್ ವ್ಯಾಪಾರಿ' . ಆರದ 'ಕೈ' ಬಿಸಿ

Oct 14, 2021, 11:50 PM IST

ಬೆಂಗಳೂರು(ಅ. 14)  ಸಿದ್ದರಾಮಯ್ಯರನ್ನ(Siddaramaiah) ಹೊಗಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  (DK Shivakumar) ಮೇಲೆ ಕಾಂಗ್ರೆಸ್ (Congress) ಕಚೇರಿಯಲ್ಲಿ ಕೈ ನಾಯಕರಿಂದಲೇ ಆರೋಪ.  ಹೌದು ಇಬ್ಬರು ನಾಯಕರು ಮಾತಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಮತ್ತೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಇನ್ನೊಂದು ಕಡೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ ಕೃಷ್ಣಮೂರ್ತಿ ಎಂಬುವರ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿಟ್ಟಿದ್ದಾರೆ ಎಂದು ಸೊಗಡು ಶಿವಣ್ಣ ಆರೋಪಿಸಿದ್ದಾರೆ.

ಕಾಂಗ್ರೆಸ್ ಬಣ ರಾಜಕಾರಣ ಮತ್ತೆ ಬಟಾಬಯಲು

ಹಿಂದಿನ ಮೈತ್ರಿ ಸರ್ಕಾರ ಬೀಳಲು ಏನು ಕಾರಣ? ಹಿಂದಿನ ಸರ್ಕಾರದಲ್ಲಿ ಕಮಿಷನ್ ಇತ್ತಾ? ಡಿಕೆ ಶಿವಕುಮಾರ್ ಮೇಲೆ ಷಡ್ಯಂತ್ರ ಮಾಡಲು ಕಾರಣವೇನು? ಸಚಿವ ಎಸ್‌ ಟಿ ಸೋಮಶೇಖರ್ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.   ಬೆಂಗಳೂರಿನಲ್ಲೊಂದು ಮಂಗಳೂರಿನಲ್ಲೊಂದು ನೈತಿಕ ಪೊಲೀಸ್ ಗಿರಿ ಪ್ರಕರಣದ ಬಗೆಗಿನ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಸಿದ್ದರಾಮಯ್ಯ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ನಡುವೆ ಟ್ವೀಟ್ ಸಮರ ನಡೆದಿದೆ.