Asianet Suvarna News Asianet Suvarna News

Water Crisis: ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಹೆಚ್ಚಿದ್ದೇಕೆ..? ಈ ಹಿಂದಿಲ್ಲದ ಬೇಸಿಗೆ ಹಾಹಾಕಾರ ರಾಜಧಾನಿಗೆ ಈಗೇಕೆ..?

ತಮಿಳುನಾಡಿಗೆ ನೀರು ಬಿಟ್ಟಿದ್ದೇ ತಪ್ಪೆಂದು ಹೇಳ್ತಿದೆ ಬಿಜೆಪಿ
ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಈ ಸ್ಥಿತಿ ಬಂತಾ? 
ಕೆಆರ್‌ಎಸ್‌ನಲ್ಲಿ ನೀರು ದುಪ್ಪಟ್ಟಿದೆ ಎನ್ನುತ್ತಿದೆ ಸರ್ಕಾರ

ಬೇಸಿಗೆ ಸಂದರ್ಭದಲ್ಲಿ ಹಿಂದೆಲ್ಲ ಬೆಂಗಳೂರಿನ(Bengaluru) ಜನ ಈ ರೀತಿ ನೀರಿನ ಪ್ರಾಬ್ಲಂ ನೋಡಿರಲಿಲ್ಲ. ಬೆಂಗಳೂರಿನಲ್ಲಿ ಕೂತು ಉತ್ತರ ಕರ್ನಾಟಕ ಭಾಗದ ಜನರ ನೀರಿನ ಸಮಸ್ಯೆಗಳನ್ನು(Water Problem) ನೋಡಿ ಮರಗುತ್ತಿದ್ದರು. ಆದ್ರೀಗ, ಅದೇನ್ ಎಡವಟ್ಟಾಯ್ತೋ ಗೊತ್ತಿಲ್ಲ. ಬೆಂಗಳೂರು ಜನರೂ ನೀರಿಲ್ಲದೆ ಪರದಾಡುವಂತಾಗಿದೆ. ಬೆಂಗಳೂರು ನಿವಾಸಿಗಳಿಗೆ ನೀರಿನ ವಿಚಾರದಲ್ಲಿ ಮೂಗಿಗೆ ತುಪ್ಪ ಸವರಿದಂತಾಗುತ್ತಿದೆ. ತುಪ್ಪ ಇದೇ ಆದ್ರೆ ತಿನ್ನಕ್ಕೆ ಆಗಲ್ಲ. ಹಾಗೆನೇ ನೀರು ಬರುತ್ತೆ ಆದ್ರೆ ಬಿಂದಿಗೆ ತುಂಬಲ್ಲ. ನೀರು ಬಂತೆಂಬ ಖುಷಿಯಲ್ಲಿ ಬಿಂದಿಗೆ ಹಿಡಿದು ಹೋಗುವಷ್ಟರಲ್ಲಿ, ಬಂದ ನೀರು(Water) ಹೀಗೆ ಬಂದು ಹಾಗೆ ಹೊರ್ಟು ಹೋಗಿರುತ್ತಂತೆ. ಇಪತ್ತು ದಿನಗಳಿಂದ ಬೆಂಗಳೂರಿನ ಜನರಿಗೆ ಸರಿಯಾಗಿ ನೀರು ಸಿಕ್ತಿಲ್ಲ. ನೀರು ಬಿಟ್ಟಿದ್ದೇವೆಂದು ಹೇಳಿಕೊಳ್ಳುವುದಕ್ಕಾಗಿ, ರಾತ್ರಿ ಜನ ಮಲಗಿದಾಗ ನೀರು ಬಿಡ್ತಾರಂತೆ. ಒಂದು ಸರಿ ನೀರು ಬಿಟ್ಟಾಗ, ಹೆಚ್ಚೆಂದ್ರೆ ಒಬ್ಬರಿಗೆ ನಾಲ್ಕು ಬಿಂದಿಗೆ ನೀರು ಮಾತ್ರ ಸಿಗುತ್ತದೆಯಂತೆ. 

ಇದನ್ನೂ ವೀಕ್ಷಿಸಿ:  Prakash Raj interview: ‘ಫೋಟೋ’ ಪ್ರೆಸೆಂಟ್ ಮಾಡಲು ಕಾರಣ ಕೊಟ್ಟ ಪ್ರಕಾಶ್ ರಾಜ್! ಈ ಸಿನಿಮಾಗೂ ರಾಜಕೀಯಕ್ಕೂ ಇದೆಯಾ ಲಿಂಕ್?