1000 ವರ್ಷಗಳ ಬಳಿಕವೂ ಜನವರಿ 22,2024ನ್ನು ಎಲ್ಲರೂ ನೆನಪಿಸುತ್ತಾರೆ: ಪ್ರಧಾನಿ ಮೋದಿ
ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣದ ಕನ್ನಡ ಅವತರಣಿಕೆ ಇಲ್ಲಿದೆ..
ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ(Narendra Mod) ಮಾತನಾಡಿ, ಹೋರಾಟ, ತ್ಯಾಗ ಬಲಿದಾನ ಬಳಿಕ ನಮ್ಮ ಪ್ರಭು ಶ್ರೀರಾಮ(Lord Rama) ಚಂದ್ರ ಇಂದು ಆಯೋಧ್ಯೆಗೆ(Ayodhya) ಆಗಮಿಸಿದ್ದಾನೆ ಎಂದರು. ನಮ್ಮೆಲ್ಲಾರ ರಾಮ ಅಯೋಧ್ಯೆಗೆ ಆಗಮಿಸಿದ್ದಾನೆ.ಇಷ್ಟು ವರ್ಷ ಶ್ರೀರಾಮನ ಸೇವೆಯಲ್ಲಿ ನಮ್ಮಿಂದ ಏನಾದರೂ ಕಡಿಮೆಯಾಗಿದ್ದರೆ ಕ್ಷಮೆ ಕೇಳುತ್ತೇನೆ. ನಮ್ಮ ರಾಮ ಲಲ್ಲಾ(Ram Lalla Murthi) ಟೆಂಟ್‌ನಲ್ಲಿ ಇರುವುದಿಲ್ಲ. ನಮ್ಮ ರಾಮಲಲ್ಲಾ ಭವ್ಯ ರಾಮ ಮಂದಿರದಲ್ಲಿ(Ram Mandir) ವಿರಾಜಮಾನನಾಗಿದ್ದಾನೆ. ಇಂದು ಪ್ರಾಣಪ್ರತಿಷ್ಠೆಯ ಅನುಭೂತಿ ವಿಶ್ವದ ಮೂಲೆ ಮೂಲೆಗೆ ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: Nitish Kumar: ದಿಢೀರ್ ರಾಜ್ಯಪಾಲರ ಭೇಟಿಯಾದ ನಿತೀಶ್ ಕುಮಾರ್! ಆರ್‌ಜೆಡಿ, ಕಾಂಗ್ರೆಸ್‌ಗೆ ಕೈ ಕೊಡ್ತಾರಾ ?