Nitish Kumar: ದಿಢೀರ್‌ ರಾಜ್ಯಪಾಲರ ಭೇಟಿಯಾದ ನಿತೀಶ್‌ ಕುಮಾರ್! ಆರ್‌ಜೆಡಿ, ಕಾಂಗ್ರೆಸ್‌ಗೆ ಕೈ ಕೊಡ್ತಾರಾ ?

ಭಾರತ ರತ್ನ ಘೋಷಣೆ ಬಳಿಕ ಜೆಡಿಯು-ಆರ್‌ಜೆಡಿ ಭಿನ್ನರಾಗ
ಕಾಂಗ್ರೆಸ್‌ಗೆ ನೇರಾನೇರ ಟಾಂಗ್ ಕೊಟ್ಟ ಸಿಎಂ ನಿತೀಶ್‌ ಕುಮಾರ್
ಮೋದಿ ಸರ್ಕಾರಕ್ಕೆ ನಾವು ಧನ್ಯವಾದ ತಿಳಿಸ್ತೀನಿ ಎಂದ ನಿತೀಶ್..!

Share this Video
  • FB
  • Linkdin
  • Whatsapp

ಬಿಹಾರ ರಾಜಕೀಯದಲ್ಲಿ ಮತ್ತೊಮ್ಮೆ ಮಿಂಚಿನ ಸಂಚಲನ ಉಂಟಾಗಿದ್ದು, ಸಿಎಂ ನಿತೀಶ್‌ ಕುಮಾರ್‌(Nitish Kumar) ದಿಢೀರ್‌ ಅಂತಾ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಕುಟುಂಬ ರಾಜಕಾರಣಕ್ಕೆ(Family Politics) ನಿತೀಶ್‌ ಕುಮಾರ್ ಟಾಂಗ್‌ ಕೊಟ್ಟಂತೆ ಕಾಣುತ್ತಿದೆ. ಕುಟುಂಬ ರಾಜಕಾರಣದ ಹೆಸರೇಳಿ ಮಿತ್ರ ಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ಆದ್ರೆ ನಿತೀಶ್‌ ಟಾಂಗ್‌ ಕೊಟ್ಟಿದ್ದು ಕಾಂಗ್ರೆಸ್‌ಗಾ ಅಥವಾ ಆರ್‌ಜೆಡಿಗಾ ಎಂಬುದು ಸ್ಪಷ್ಟವಾಗಿಲ್ಲ. ಕರ್ಪೂರಿ ಠಾಕೂರ್(Karpoori Thakur) ಹೊಗಳುತ್ತಲೇ ನಿತೀಶ್ ಕುಮಾರ್‌ ಟಾಂಗ್ ನೀಡಿದ್ದಾರೆ. ತೇಜಸ್ವಿ ಇದ್ದ ವೇದಿಕೆಯಲ್ಲೇ ನಿತೀಶ್ ಕುಮಾರ್ ಮಾತನಾಡಿದ್ದು, ಬಿಹಾರ ಸಿಎಂ ನಿತೀಶ್ ಮಾತು ಕುತೂಹಲ ಮೂಡಿಸಿದೆ. ಇದರ ನಡುವೆ ನಿತೀಶ್ ಕುಮಾರ್‌ ಎನ್‌ಡಿಎಗೆ ಮರಳುವ ಕುರಿತು ಚರ್ಚೆ ನಡೆಯುತ್ತಿದೆ.

ಇದನ್ನೂ ವೀಕ್ಷಿಸಿ: Bitcoin case: ಬಿಟ್ ಕಾಯಿನ್ ಹಗರಣದಲ್ಲಿ ಭಾರೀ ಬೆಳವಣಿಗೆ: ಎಸ್ಐಟಿ ತಂಡದಿಂದ ಇಬ್ಬರು ಇನ್‌ಸ್ಪೆಕ್ಟರ್‌ಗಳು ವಶಕ್ಕೆ !

Related Video