ಮಾನವೀಯತೆ, ಸಂವೇದನೆಯಿಂದ ಕೊರೊನಾವನ್ನು ನಾವು ಎದುರಿಸಿದ್ದೇವೆ: ಪ್ರಧಾನಿ ಮೋದಿ

ಜಿ-20 ಮೂಲಕ ದೇಶದ ಶಕ್ತಿ ಜಗತ್ತಿಗೆ ಪರಿಚಯ
ಮಹಾಯುದ್ಧಗಳ ನಂತರ ಜಗತ್ತಿನ ವಿನ್ಯಾಸ ಬದಲಾಗಿತ್ತು
ಕೊರೊನಾ ನಂತರ ದೇಶಗಳ ಸ್ಥಾನಮಾನ ಬದಲಾಗಿದೆ
ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ

First Published Aug 15, 2023, 12:03 PM IST | Last Updated Aug 15, 2023, 12:03 PM IST

ನವದೆಹಲಿ: ಕೆಂಪುಕೋಟೆಯ ಮೇಲೆ 10ನೇ ಭಾರಿಗೆ ಪ್ರಧಾನಿ ಮೋದಿ(Narendra Modi) ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶವನ್ನುದ್ದೇಶಿಸಿ ಮೋದಿ ಭಾಷಣ ಮಾಡಿದರು.ಭಾರತ ಅತಿದೊಡ್ಡ ಶಕ್ತಿ, ಭರವಸೆ ಮತ್ತು ವಿಶ್ವಾಸವಾಗಿದೆ. ಇಡೀ ಜಗತ್ತು ಭಾರತದ ಬಗ್ಗೆ ವಿಶ್ವಾಸವಿಟ್ಟಿದೆ. ಜಿ-20 ಮೂಲಕ ದೇಶದ ಶಕ್ತಿ ಜಗತ್ತಿಗೆ ಪರಿಚಯವಾಗುತ್ತಿದೆ. ಮಹಾಯುದ್ಧಗಳ ನಂತರ ಜಗತ್ತಿನ ವಿನ್ಯಾಸ ಬದಲಾಗಿತ್ತು. ಆದ್ರೆ ಕೊರೊನಾದ(Corona) ನಂತರ ದೇಶಗಳ ಸ್ಥಾನಮಾನ ಬದಲಾಗಿದೆ. ಇಡೀ ಜಗತ್ತು ಭಾರತವನ್ನು ಮೆಚ್ಚುಗೆ, ಆಶ್ಚರ್ಯದಿಂದ ನೋಡುತ್ತಿದೆ. ಕೊರೊನಾವನ್ನು ದೇಶ ಎದುರಿಸಿದ ಪರಿ ಇದಕ್ಕೆ ಕಾರಣವಾಗಿದೆ. ಮಾನವೀಯ ಸಂವೇದನೆಯಿಂದ ಕೊರೊನಾವನ್ನು ನಾವು ಎದುರಿಸಿದ್ದೇವೆ. ಬೇರೆ ದೇಶಗಳ ನೆರವಿಗೂ ಭಾರತ(India) ಧಾವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದನ್ನೂ ವೀಕ್ಷಿಸಿ:  ಮಣಿಪುರದಲ್ಲಿ ಅನೇಕರು ಜೀವ ಕಳೆದುಕೊಂಡಿದ್ದಾರೆ, ಅಲ್ಲಿ ಶಾಂತಿ ನೆಲೆಸಲಿದೆ: ಪ್ರಧಾನಿ ಮೋದಿ