ಮಣಿಪುರದಲ್ಲಿ ಅನೇಕರು ಜೀವ ಕಳೆದುಕೊಂಡಿದ್ದಾರೆ, ಅಲ್ಲಿ ಶಾಂತಿ ನೆಲೆಸಲಿದೆ: ಪ್ರಧಾನಿ ಮೋದಿ
ಮಣಿಪುರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಂಕಷ್ಟದಿಂದ ಮಣಿಪುರ ಬೇಗ ಪಾರಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನವದೆಹಲಿ: ಕೆಂಪುಕೋಟೆಯ ಮೇಲೆ ಮಣಿಪುರದ ಸಂಘರ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇಡೀ ದೇಶ ಮಣಿಪುರದ(Manipura) ಜೊತೆಗಿದೆ ಎಂದು ಪ್ರಧಾನಿ ಮೋದಿ(PM Modi) ಹೇಳಿದರು. ಮಣಿಪುರದ ಸಂಕಷ್ಟ ಕಳೆದು ಶಾಂತಿ ನೆಲೆಸಲಿದೆ. ಅಲ್ಲಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಮಣಿಪುರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಂಕಷ್ಟದಿಂದ ಮಣಿಪುರ ಬೇಗ ಪಾರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಇದಕ್ಕೂ ಮೊದಲು ಪ್ರಧಾನಿ ದೇಶದ 140 ಕೋಟಿ ಜನತೆಗೆ ಸ್ವಾತಂತ್ರ್ಯದ ಶುಭಾಶಯಗಳನ್ನು ಕೋರಿದರು. ಜನಸಂಖ್ಯೆಯ ದೃಷ್ಠಿಯಿಂದಲೂ ನಾವು ವಿಶ್ವದಲ್ಲಿ ನಂಬರ್ 1 ಆಗಿದ್ದು, ಇಂಥ ವಿಶಾಲ ದೇಶದ 77ನೇ ಸ್ವಾತಂತ್ರ್ಯ ದಿನದ(Independence day) ಪರ್ವದಲ್ಲಿದ್ದೇವೆ ಎಂದು ಮೋದಿ ಹೇಳಿದರು.
ಇದನ್ನೂ ವೀಕ್ಷಿಸಿ: ಮೋದಿ ಪ್ರಧಾನಿಯಾದ ಮೇಲೆ ಭಾರತವನ್ನು ಬೇರೆ ದೇಶಗಳು ನೋಡುವ ದೃಷ್ಟಿ ಬದಲಾಗಿದೆ: ಸೂಲಿಬೆಲೆ