Asianet Suvarna News Asianet Suvarna News

'ತಾಯಂದಿರೇ.. ನಿಮ್ಮ ಮಂಗಳಸೂತ್ರ ಕೂಡ ಸೇಫ್‌ ಆಗಿರೋಕೆ ಬಿಡೋದಿಲ್ಲ..' ಮೋದಿ ಮಾತಿಗೆ ಕಾಂಗ್ರೆಸ್‌ ಕೊತಕೊತ!

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸಂಪತ್ತಿನ ಮರುಹಂಚಿಕೆಯ ಮಾತನಾಡಿದೆ. ಹಾಗೇನಾದರೂ ಮಾಡಿದಲ್ಲಿ ತಾಯಂದಿರೇ, ನಿಮ್ಮ ಮಂಗಳಸೂತ್ರ ಕೂಡ ಸೇಫ್‌ ಆಗಿರೋಕೆ ಬಿಡೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಮಾತಿಗೆ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ.

ನವದೆಹಲಿ (ಏ.22): ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಂಪತ್ತಿನ ಮರುಹಂಚಿಕೆ ಮಾಡುವ ಮಾತನ್ನು ಪ್ರಣಾಳಿಕೆಯಲ್ಲಿ ಹೇಳಿದೆ. ಹಾಗೇನಾದರೂ ಆದಲ್ಲಿ, ದೇಶದ ತಾಯಂದಿರೇ, ನಿಮ್ಮ ಮಂಗಳಸೂತ್ರ ಕೂಡ ಸೇಫ್‌ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರವೂ ಪುನರುಚ್ಚರಿಸಿದ್ದಾರೆ.

ಮೋದಿ ಮಾತಿಗೆ ಕಾಂಗ್ರೆಸ್‌ ನಾಯಕರು ಕೆಂಡಾಮಂಡಲರಾಗಿದ್ದು,'ಪಿಎಂ ಮೋದಿ ಸೋಲಿನ ಭೀತಿಯಿಂದ ಮಾತನಾಡುತ್ತಿದ್ದಾರೆ. 1 ನೇ ಹಂತದ ಚುನಾವಣೆಯಲ್ಲಿ ಸೋಲಿನ ಸುಳಿವು ಅವರಿಗೆ ಸಿಕ್ಕಿದೆ. ಅಧಿಕಾರ ತಪ್ಪುತ್ತೆ ಎಂದು ಮೋದಿ ಹತಾಶರಾಗಿದ್ದಾರೆ ಎಂದು ಹೇಳಿದೆ.

 'ಹಿಂದೂಗಳ ಮಂಗಳಸೂತ್ರ ಮುಸ್ಲಿಮರ ಪಾಲಾಗಲಿದೆ' ಎಂಬ ಪ್ರಧಾನಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು?

ಪ್ರಧಾನಿ ಮೋದಿ ಜನರನ್ನು ಸುಳ್ಳು ಮತ್ತು ಅನಗತ್ಯ ವಿಚಾರಗಳಲ್ಲಿ ಸಿಲುಕಿಸುತ್ತಿದ್ದಾರೆ. ಆದರೆ ‘ಮಂಗಳಸೂತ್ರ’ದ ಹೇಳಿಕೆ ನೀಡುವ ಮೂಲಕ ಎಲ್ಲ ಮಿತಿ ದಾಟಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲಿ  ಜನರ ಆಸ್ತಿ ಹಂಚುತ್ತೇವೆ ಎಂದು ಬರೆಯಲಾಗಿದೆ  ಎಂದು ಪ್ರಶ್ನೆ ಮಾಡಿದೆ.

Video Top Stories