CAA Act: ಪಾಕ್ ಸೇರಿದಂತೆ 3 ರಾಷ್ಟ್ರಗಳ ವಲಸಿಗರಿಗೆ ಭಾರತದ ಪೌರತ್ವ: ಯಾರಿಗೆ ಸಿಗಲಿದೆ ಗೊತ್ತಾ ಈ ಪ್ರಮಾಣ ಪತ್ರ?
14 ವಿದೇಶಿಯರಿಗೆ ಸಿಎಎ ಅಡಿ ಪೌರತ್ವ ಪ್ರಮಾಣ ಪತ್ರ ವಿತರಣೆ
ಮಾತಿನಿಂದಲೇ ದೀದಿಗೆ ಡೈರೆಕ್ಟ್ ಹಿಟ್ ಮಾಡಿದ ಅಮಿತ್ ಶಾ..!
CAA ಆ್ಯಕ್ಟ್ ಬಗ್ಗೆ ಮಮತಾ ಬ್ಯಾನರ್ಜಿಗೆ ಅಸಮಾಧಾನ ಯಾಕೆ..?
ಸಿಎಎ ಆ್ಯಕ್ಟ್ ಇದು ಬಡವರಿಗಾಗಿ ಮಾಡಿರುವ ಆ್ಯಕ್ಟ್-ಮೋದಿ..!
ಸದಾ ಶಾಂತಿಯನ್ನ ಬಯಸುವ ಭಾರತ, ಆ ವರ್ಷ ಅಗ್ನಿಕುಂಡದ ಸ್ವರೂಪ ಪಡೆದಿತ್ತು. ಇಂಥಾ ಬೀಭತ್ಸ ವಾತಾವರಣ ಸೃಷ್ಟಿ ಆಗೋದಕ್ಕೆ ಕಾರಣ ಕೇಂದ್ರ ಸರ್ಕಾರ(Central Government) ಕೈಗೆತ್ತಿಕೊಂಡಿದ್ದ ಸಿಎಎ ಆ್ಯಕ್ಟ್, ಅಂದ್ರೆ ಸಿಟಿಜನ್ ಶಿಪ್ ಅಮೆನ್ಮೆಂಟ್ ಆ್ಯಕ್ಟ್(CAA). ಬಿಜೆಪಿ(BJP) 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಸಿಎಎ ಆ್ಯಕ್ಟ್‌ನನ್ನು ಸೇರಿಸಿಕೊಂಡಿತ್ತು. ಅದರ ಎಫಕ್ಟೇ ಭಾರತೀಯರು ರಸ್ತೆಗಿಳಿದು ಹೋರಾಟ ಮಾಡಿದ್ದರು. ಈ ಆ್ಯಕ್ಟ್ ಪ್ರಕಾರ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂಗಳಿಗೆ(Hindus) ಭಾರತೀಯ ನಾಗರಿಕ ಪಟ್ಟ ಕೊಡುವುದು. ಸಂಸತ್ತು 2019ರ ಡಿಸೆಂಬರ್ನಲ್ಲೇ ಈ ಆ್ಯಕ್ಟ್ಗೆ ಅಂಗೀಕಾರ ನೀಡಿತ್ತು. ಆದರೂ 4ವರ್ಷ ವಿಳಂಬದ ನಂತರ, ಅಂದರೆ 2024ರ ಮಾರ್ಚ್11ರಂದು ನರಕಕ್ಕೆ ಹೆದರಿ ಓಡಿ ಬಂದ ಹಿಂದೂಗಳಿಗೆ ಭಾರತೀಯ(Indians) ಅನ್ನೊ ಪಟ್ಟ ನೀಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ಕುಮಾರ್ ಭಲ್ಲಾ ಇತ್ತಿಚೆಗಷ್ಟೇ ದೆಹಲಿಯಲ್ಲಿ ಪೌರತ್ವಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಪೌರತ್ವದ ಪ್ರಮಾಣ(Indian citizenship) ಪತ್ರ ನೀಡಿದ್ದರು. ಹೀಗೆ ಪೌರತ್ವದ ಪ್ರಮಾಣ ಪತ್ರ ಪಡೆದವರನ್ನ ಪಿಎಂ ಮೋದಿ ಕೂಡ ಭೇಟಿಯಾಗಿದ್ದಾರೆ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!