Narendra Modi: ಹೇಗೆ ಶುರುವಾಯ್ತು..ಎಲ್ಲಿಗೆ ಬಂತು ಮೋದಿ ದಂಡಯಾತ್ರೆ..? ವಿಪಕ್ಷಗಳ ಒಗ್ಗಟ್ಟು ಫಲ ಕೊಡುತ್ತಾ..?

ಉತ್ತರಕ್ಕೊಂದು.. ದಕ್ಷಿಣಕ್ಕೊಂದು ವ್ಯೂಹ..ಏನಿದು ರಣತಂತ್ರ..?
ಮತಯುದ್ಧದಲ್ಲಿ ಹಸ್ತಪಾಳಯದ ಅಬ್ಬರ..ಕೇಸರಿ ಪಡೆ ಆರ್ಭಟ..!
ಲೋಕಸಭಾ ಸಮರ ಗೆಲ್ಲೋಕೆ ರಾಹುಲ್ ಗಾಂಧಿ ಪ್ರಚಾರ ಹೇಗಿತ್ತು..?

First Published May 31, 2024, 6:02 PM IST | Last Updated May 31, 2024, 6:02 PM IST

ಈ ಬಾರಿಯಂತೂ ಭಾರತ ಸುದೀರ್ಘವಾದ ಚುನಾವಣೆಯನ್ನೇ ನೋಡ್ತಾ ಇದೆ. ಏಪ್ರಿಲ್ 19ರಿಂದ ಶುರುವಾದ ಈ ಎಲೆಕ್ಷನ್ ಭರಾಟೆ, ಜೂನ್ 1ರ ತನಕ ಇರಲಿದೆ. ಅಂತಿಮ ಹಂತಕ್ಕೆ ಬಂದು ನಿಂತಿರೋ ಚುನಾವಣೆ, ಈಗ ಮತ್ತಷ್ಟು, ಮಗದಷ್ಟು ರಣರೋಚಕವಾಗಿ ಭಾಸವಾಗ್ತಾ ಇದೆ. 2024ರ ಚುನಾವಣೆ ಅತ್ಯಂತ ಕುತೂಹಲ ಮೂಡಿಸಿರೋದಂತೂ ಸುಳ್ಳಲ್ಲ. ಮೋದಿ(Narendra Modi) ಅವರ ಮುಂದಾಳ್ತನದಲ್ಲಿ ಬಿಜೆಪಿ(BJP) 400 ಸ್ಥಾನ ಗೆಲ್ಲೋ ಹುಮ್ಮಸ್ಸಿನಲ್ಲಿದೆ. ಹಸ್ತ ಪಾಳಯ(Congress) ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕೋ ತುಡಿತದಲ್ಲಿದೆ. ಕಲಬುರ್ಗಿಯಲ್ಲಿ ಮೋದಿ ಬೃಹತ್ ಸಮಾವೇಶ ನಡೆಸಿದ್ರು. ಬರೋಬ್ಬರಿ 75 ದಿನಗಳಿಂದಲೂ, ಮೋದಿ ಸಭೆ, ಸಮಾವೇಶ, ರೋಡ್ ಷೋಗಳಲ್ಲಿ ಕಂಪ್ಲೀಟ್ ಬ್ಯುಸಿಯಾಗಿದಾರೆ. ದೇಶದ ಪ್ರಧಾನಿಯೇ ಆದ್ರೂ, ಪಕ್ಷದ ಸ್ಟಾರ್ ಕ್ಯಾಂಪೇನರ್ ಮೋದಿ. ಹಾಗಾಗಿನೇ, ಕಾರ್ಯಕರ್ತರ ಹಾಗೇನೇ ಪಕ್ಷ ಗೆಲ್ಲಿಸಿಕೊಳ್ಳೋಕೆ ದೇಶದ ಉದ್ದಗಲಕ್ಕೂ ಸಂಚಾರ ಮಾಡ್ತಿದಾರೆ. ಮೇ30ಕ್ಕೆ, ದೇಶದಲ್ಲೆಲ್ಲಾ ಸಂಚಲನ ಸೃಷ್ಟಿಸಿದ ಈ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದೆ. ಜೂನ್ 1ರ ಅಂತಿಮ ಮತದಾನದ ಮೂಲಕ, ಮತದಾನ ಪ್ರಕ್ರಿಯೆ ಅಂತ್ಯವಾಗುತ್ತೆ. ಅದರ ಬೆನ್ನಲ್ಲೇ ಸಮೀಕ್ಷೆಗಳ ಲೆಕ್ಕಾಚಾರ, ಹೊಸ ಹೊಸ ವಿಚಾರಗಳೆಲ್ಲಾ ಚರ್ಚೆಯಾಗ್ತಾವೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್ ರೇವಣ್ಣ ಹೆದರಿದ್ದು ಕಾನೂನಿಗಾ..ತಾತನ ಎಚ್ಚರಿಕೆಗಾ..? ಕೊನೆಗೂ ಕಾನೂನಿಗೆ ಶರಣಾದ ಪೆನ್‌ಡ್ರೈವ್ ವೀರ..!