ಪ್ರಜ್ವಲ್ ರೇವಣ್ಣ ಹೆದರಿದ್ದು ಕಾನೂನಿಗಾ..ತಾತನ ಎಚ್ಚರಿಕೆಗಾ..? ಕೊನೆಗೂ ಕಾನೂನಿಗೆ ಶರಣಾದ ಪೆನ್‌ಡ್ರೈವ್ ವೀರ..!

34 ದಿನಗಳ ನಂತರ ವಾಪಸ್ ಬಂದ ಪ್ರಜ್ವಲ್ ರೇವಣ್ಣ 
ಮಧ್ಯರಾತ್ರಿ ವಿಮಾನ ನಿಲ್ದಾಣದಲ್ಲೇ ಪ್ರಜ್ವಲ್‌ ಬಂಧನ
ಪ್ರಜ್ವಲ್ ರೇವಣ್ಣ 1 ತಿಂಗಳ ಕಣ್ಣಾಮುಚ್ಚಾಲೆ ಅಂತ್ಯ 

First Published May 31, 2024, 5:48 PM IST | Last Updated May 31, 2024, 5:49 PM IST

ಅಶ್ಲೀಲ ವಿಡಿಯೋ ಬಾಂಬ್ ಸ್ಫೋಟಗೊಂಡ ಬೆನ್ನಲ್ಲೇ ದೇಶ ಬಿಟ್ಟು ವಿದೇಶಕ್ಕೆ ಹಾರಿದ್ದ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ(Prajwal Revanna). ಏಪ್ರಿಲ್ 26ರಂದು ಹಾಸನದ ಹೊಳೆನರಸೀಪುರದಲ್ಲಿ ಲೋಕಸಭಾ ಚುನಾವಣೆಗೆ ಮತ ಚಲಾಯಿಸಿ ಅದೇ ದಿನ ಮಧ್ಯರಾತ್ರಿ ಬೆಂಗಳೂರಿಗೆ ಬಂದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜರ್ಮನಿಯ ಮ್ಯೂನಿಚ್‌ಗೆ ಹಾರಿದ್ದ. ಇದೀಗ ಪ್ರಜ್ವಲ್ ರೇವಣ್ಣ ವಾಪಸ್ ಬಂದಿದ್ದು, 34 ದಿನಗಳು.. 816 ಗಂಟೆಗಳು.. 48,960 ನಿಮಿಷಗಳ ಬಳಿಕ ಹಾಸನ ಸಂಸದ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದಾನೆ. ನಾಲ್ಕಾರು ಬಾರಿ ಕಣ್ಣಾಮುಚ್ಚಾಲೆ ಆಟವಾಡಿ, ಬುಕ್ ಆಗಿದ್ದ ಫ್ಲೈಟ್ ಟಿಕೆಟ್‌ಗಳನ್ನು ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡಿ, ತಾತ-ಚಿಕ್ಕಪ್ಪನಿಂದ ಛೀಮಾರಿ ಹಾಕಿಸಿಕೊಂಡ ನಂತರ, ಅಜ್ಞಾತವಾಸ ಮುಗಿಸಿ ಹೊರ ಬಂದಿರೋ ಪ್ರಜ್ವಲ್ ರೇವಣ್ಣ, ವಾಪಸ್ ಬೆಂಗಳೂರಿಗೆ ಬಂದಿದ್ದಾರೆ. ಪ್ರಜ್ವಲ್ ಪ್ರಯಾಣಿಸುತ್ತಿರುವ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನ ಜರ್ಮನಿಯ ಮ್ಯೂನಿಚ್ ಅಂತಾರಾಷ್ಚ್ರೀಯ ವಿಮಾನ ನಿಲ್ದಾಣದಿಂದ ಭಾರತೀಯ ಕಾಲಮಾನ ಗುರುವಾರ ಸಂಜೆ 4.20ಕ್ಕೆ ಟೇಕಾಫ್ ಆಗಿತ್ತು. ಕೊನೆಗೂ ಎಸ್‌ಐಟಿ(SIT) ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್ ರೇವಣ್ಣ ಬಂಧನ..ಹೇಗಿರುತ್ತೆ ತನಿಖೆ..? ಮೊಬೈಲ್ ಮದರ್ ಡಿವೈಸ್ ಬಗ್ಗೆ ಎಸ್‌ಐಟಿ ತನಿಖೆ!