ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷಚೇತನರ ಪರದಾಟ: ಸರ್ಕಾರಿ ಸೌಲಭ್ಯ ಪಡೆಯಲು ನಿತ್ಯವೂ ಅಲೆದಾಟ
ಜಿಲ್ಲೆಯಲ್ಲಿ ವಿಶೇಷಚೇತನರು ಸರ್ಕಾರದಿಂದ ದೊರೆಯಬೇಕಿದ್ದ ಸೌಲಭ್ಯ ಪಡೆಯಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಕಿ.ಲೋ ಮೀಟರ್ ದೂರದ ಊರುಗಳಿಂದ ಜಿಲ್ಲಾಸ್ಪತ್ರೆಗೆ ತೆರಳಿದ್ರೆ, ವಿಶೇಷಚೇತನ ಸಮಸ್ಯೆ ಕೇಳೋರೆ ಇಲ್ಲದಂತಾಗಿದೆ.. ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ವಿಶೇಷಚೇತನರು ದಿನನಿತ್ಯ ಅಲೆದಾಡುವಂತಾಗಿದೆ.
ವಿಕಲ ಚೇತನರಿಗಾಗಿಯೇ ಸರ್ಕಾರ ಹಲವು ಸೌಲ್ಯಭ್ಯಗಳನ್ನ ಕಲ್ಪಿಸಿದೆ. ವಿಶೇಷಚೇತನರ ಆರೋಗ್ಯ ಸುಧಾರಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತದೆ.. ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ಈ ಸೌಲಭ್ಯ ಪಡೆಯಲು ವಿಶೇಷ ಚೇತನರು ಪರದಾಡುವಂತಾಗಿದೆ. ವಾಯ್ಸ್ : ಪ್ರತಿ ವಾರ ತಾಲೂಕಾ ಆಸ್ಪತ್ರೆಗಳಲ್ಲಿ ವಿಕಲಚೇತರ ಶಿಬಿರ ನಡೆಯುತ್ತಿತ್ತು. ಆದ್ರೆ ಕಳೆದ 6 ತಿಂಗಳಿಂದ ತಾಲೂಕಾ ಮಟ್ಟದ ಶಿಬಿರ ಬಂದ್ ಮಾಡಿ, ಜಿಲ್ಲಾಸ್ಪತ್ರೆಯಲ್ಲಿ ಕ್ಯಾಂಪ್ ನಡೆಸಲಾಗುತ್ತಿದೆ. ದೂರದ ಊರಿಂದ ಜಿಲ್ಲಾಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಕಷ್ಟಪಟ್ಟು ದೂರದ ಊರುಗಳಿಂದ ಬಂದರೂ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೇ ಇರುವುದಿಲ್ಲ ಅನ್ನೋದು ವಿಶೇಷ ಚೇತನರ ಆರೋಪ. ತಮ್ಮ ತಮ್ಮ ಊರುಗಳಿಂದ ಕಷ್ಟಪಟ್ಟು ಜಿಲ್ಲಾಸ್ಪತ್ರೆಗೆ ಬಂದ್ರೆ, ಆಸ್ಪತ್ರೆಯಲ್ಲಿ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲದಂತಾಗಿದೆ.. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಸ್ಪತ್ರೆಯ ಸರ್ಜನ್ ಪದ್ಮಾನಂದ್ ಗಾಯಕ್ವಾಡ್, ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ತಾಲೂಕಲ್ಲಿ ನಡೆಯುವ ವಿಕಲಚೇತನರ ಶಿಬಿರ ಬಂದ್ ಆಗಿದೆ. ಕಳೆದ ಎರಡು ವಾರಗಳಿಂದ ಜಿಲ್ಲಾಸ್ಪತ್ರೆಯಲ್ಲೂ ಕ್ಯಾಂಪ್ ಸ್ಥಗಿತಗೊಳಿಸಲಾಗಿದೆ ಎನ್ನುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಮತ್ತೆ ಶುರುವಾಯ್ತು ಪಂಚಮಸಾಲಿ ಮೀಸಲಾತಿ ಕಿಚ್ಚು: ಲೋಕಸಭೆ ಚುನಾವಣೆ ಹೊತ್ತಲ್ಲಿ ‘ಬಸವ’ ಶ್ರೀ ರಣಕಹಳೆ