Asianet Suvarna News Asianet Suvarna News

2 ವರ್ಷ ಬಳಿಕ ಮೈಸೂರಿನಲ್ಲಿ ಅದ್ಧೂರಿ ದಸರಾ, ಐತಿಹಾಸಿಕ ಜಂಬೂ ಸವಾರಿ ಉತ್ಸವ!

ಮೈಸೂರು ಅದ್ಧೂರಿ ದಸರಾ, ಭಾರತಕ್ಕೆ ಆರ್‌ಎಸ್ಎಸ್ ಮುಖ್ಯಸ್ಥ ನೀಡಿದ ಎಚ್ಚರಿಕೆ ಸಂದೇಶ, ರಷ್ಯಾ ಉಕ್ರೇನ್ ಯುದ್ಧದಲ್ಲಿ ಮಹತ್ವದ ಬೆಳವಣಿಗೆ ಸೇರಿದಂತೆ ಇಡೀ ದಿನದ ಸಂಪೂರ್ಣ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Oct 5, 2022, 11:03 PM IST

ಕೊರೋನಾ ಕಾರಣದಿಂದ ಕಳೆದೆರಡು ವರ್ಷದ ಬಳಿಕ ಅದ್ಧೂರಿ ಮೈಸೂರು ದಸರಾ ಭಾರಿ ವಿಜ್ರಂಭಣೆಯಿಂದ ಆಚರಿಸಲಾಗಿದೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅದ್ಧೂರಿ ಜಂಬೂ ಸವಾರಿಗೆ ಚಾಲನೆ ನೀಡಿದರು. ನಾಡದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬು ಸವಾರಿಗೆ ಚಾಲನೆ ನೀಡಿದರು. ಜಟ್ಟಿಗಳ ಕಾಳಗ, ಬನ್ನಿ ಪೂಜೆ, ಚಾಮುಂಡಿ ಬೆಟ್ಟದಿಂದ ನಾಡದೇವತೆಯ ಮೆರವಣಿಗೆ ಉತ್ಸವ ಕಣ್ಣನ ಸೆಳೆಯಿತು. ಅದ್ಧೂರಿ ಮೈಸೂರು ದಸಾರ ವೀಕ್ಷಿಸಲು ಲಕ್ಷಾಂತರ ಮಂದಿ ಆಗಮಿಸಿದ್ದರು. ಮೈಸೂರು ದಸರಾ, ಮುಂಬೈನಲ್ಲಿ ಶಿವಸೇನೆ ಎರಡು ಬಣಗಳಿಂದ ದಸರಾ, ಭಾರತ್ ರಾಷ್ಟ್ರ ಸಮಿತಿ ರಾಷ್ಟ್ರೀಯ ಪಕ್ಷ ಘೋಷಣೆ, ಜನಸಂಖ್ಯಾ ಅಸಮತೋಲನ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.