ಕೊರೊನಾ ಕಂಟ್ರೋಲ್‌ಗೆ ಮುಕ್ಕಾಲು ಭಾರತವನ್ನು 8 ವಾರ ಲಾಕ್‌ಡೌನ್‌ ಮಾಡ್ಬೇಕಂತೆ!

- ಕರ್ನಾಟಕದ 28 ಜಿಲ್ಲೆಯಲ್ಲಿ 10%ಗಿಂತ ಹೆಚ್ಚು ಪಾಸಿಟಿವಿಟಿ- ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ 528 ಜಿಲ್ಲೆ ಲಾಕ್‌ಡೌನ್‌ ಮಾಡಲು ಐಸಿಎಂಆರ್‌ ಸಲಹೆ- ಮುಕ್ಕಾಲು ಭಾರತ 8 ವಾರ ಲಾಕ್‌ಡೌನ್‌ ಮಾಡಿ!

Share this Video
  • FB
  • Linkdin
  • Whatsapp

ನವದೆಹಲಿ (ಮೇ. 14): ಕೊರೋನಾ 2ನೇ ಅಲೆಯ ತೀವ್ರತೆ ಕಡಿಮೆ ಮಾಡಲು ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಇನ್ನೂ 6-8 ವಾರಗಳ ಕಾಲ ಲಾಕ್ಡೌನ್‌ ಜಾರಿ ಮಾಡುವುದು ಅತ್ಯಗತ್ಯ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ಮುಖ್ಯಸ್ಥ ಡಾ.ಬಲರಾಂ ಭಾರ್ಗವ ಸಲಹೆ ನೀಡಿದ್ದಾರೆ. 

ಸಿದ್ದವಾಯ್ತು ಆಕ್ಸಿಜನ್ ಬಸ್, ಕೊರೊನಾ ಸಂಕಷ್ಟದ ನಡುವೆ ಶುಭ ಸಮಾಚಾರಗಳಿವು

ಕರ್ನಾಟಕದ 31 ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಪ್ರಸಕ್ತ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಅಂದರೆ ಐಸಿಎಂಆರ್‌ ಸಲಹೆಯನ್ನು ಕೇಂದ್ರ ಸರ್ಕಾರ ಅಥವಾ ಕರ್ನಾಟಕ ಸರ್ಕಾರ ಮಾನ್ಯ ಮಾಡಿದರೆ ಈ 28 ಜಿಲ್ಲೆಗಳಲ್ಲಿ ಇನ್ನೂ 8 ವಾರ ಅಂದರೆ 2 ತಿಂಗಳು ಲಾಕ್‌ಡೌನ್‌ ಜಾರಿ ಮಾಡಬೇಕಾಗುತ್ತದೆ. ಈ ಸಲಹೆಯನ್ನು ಸರ್ಕಾರ ಪರಿಗಣಿಸುತ್ತಾ..? 

Related Video