ಕೊರೊನಾ ಮಹಾಮಾರಿ, ಕೃಷಿಕಾಯ್ದೆ ಮೋದಿ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿತಾ.? ಸಮೀಕ್ಷೆ ಹೇಳೋದೇ ಬೇರೆ!

ಕೊರೊನಾ ಮಹಾಮಾರಿ, ದೆಹಲಿಯಲ್ಲಿ ರೈತರ ಪ್ರತಿಭಟನೆ, ಕೃಷಿ ಕಾಯ್ದೆ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿದೆ. ಮೋದಿ ಹವಾ ಇನ್ಮುಂದೆ ನಡೆಯುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾದರೆ ಮೋದಿ ಯುಗ ಮುಕ್ತಾಯವಾಗುತ್ತಾ..? ಎಂಬ ಪ್ರಶ್ನೆಗೆ ಇಲ್ಲ ಎನ್ನುತ್ತಿದೆ ಸಮೀಕ್ಷೆ. 

First Published Jan 23, 2021, 1:51 PM IST | Last Updated Jan 23, 2021, 1:56 PM IST

ಬೆಂಗಳೂರು (ಜ. 23): ಕೊರೊನಾ ಮಹಾಮಾರಿ, ದೆಹಲಿಯಲ್ಲಿ ರೈತರ ಪ್ರತಿಭಟನೆ, ಕೃಷಿ ಕಾಯ್ದೆ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿದೆ. ಮೋದಿ ಹವಾ ಇನ್ಮುಂದೆ ನಡೆಯುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾದರೆ ಮೋದಿ ಯುಗ ಮುಕ್ತಾಯವಾಗುತ್ತಾ..? ಎಂಬ ಪ್ರಶ್ನೆಗೆ ಇಲ್ಲ ಎನ್ನುತ್ತಿದೆ ಸಮೀಕ್ಷೆ. 

ಅಕ್ರಮ ಗಣಿಗಾರಿಕೆ ಮಾಡುವ ಖದೀಮರಿಗೆ ಸಿಎಂ ಕಡಕ್ ಎಚ್ಚರಿಕೆ...!

ಈಗ ಚುನಾವಣೆ ನಡೆದರೂ ಎನ್‌ಡಿಎ ಮೈತ್ರಿಕೂಟ 321 ಸ್ಥಾನ ಗೆಲ್ಲಲಿದೆ. ಈ ಪೈಕಿ ಬಿಜೆಪಿಯೊಂದೇ 291 ಸ್ಥಾನದ ಮೂಲಕ ಏಕಾಂಗಿಯಾಗಿ ಬಹುಮತಕ್ಕೆ ಅಗತ್ಯವಾದ ಬಲ ಪಡೆದುಕೊಳ್ಳಲಿದೆ. ಮತ್ತೊಂದೆಡೆ ಕಾಂಗ್ರೆಸ್‌ ಕೇವಲ 51 ಸ್ಥಾನಕ್ಕೆ ಮತ್ತು ಒಟ್ಟಾರೆ ಯುಪಿಎ ಮೈತ್ರಿಕೂಟ 93 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಎನ್‌ಡಿಎಗೆ ಶೇ. 43, ಯುಪಿಎಗೆ ಶೇ.27 ಮತ್ತು ಇತರ ಪಕ್ಷಗಳಿಗೆ ಶೇ. 30ರಷ್ಟುಮತಗಳು ಪ್ರಾಪ್ತವಾಗಲಿದೆ ಎಂದಿದೆ ಇಂಡಿಯಾ ಟುಡೇ- ಕಾರ್ವಿ ಇನ್‌ಸೈಟ್ಸ್‌’ನ ‘ಮೂಡ್‌ ಆಫ್‌ ದಿ ನೇಷನ್‌’ಸಮೀಕ್ಷೆ...!