Asianet Suvarna News Asianet Suvarna News

ಮಧ್ಯಪ್ರದೇಶದಲ್ಲಿ ಚೌವ್ಹಾಣ್ ರಾಜ್ಯಭಾರ ಅಂತ್ಯ..! 3 ಬಾರಿ ಶಾಸಕನಿಗೆ ಸಿಎಂ ಪಟ್ಟ ಕಟ್ಟಿದ ಹೈಕಮಾಂಡ್ !

ಮಧ್ಯ ಪ್ರದೇಶದಲ್ಲಿ ಹೊಸಬರಿಗೆ ಮಣೆ ಹಾಕಿದ ಹೈಕಮಾಂಡ್..!
ಮಧ್ಯಪ್ರದೇಶಕ್ಕೆ ಮೋಹನ್ ಯಾದವ್ ಮುಂದಿನ ಮುಖ್ಯಮಂತ್ರಿ
ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ ಮೂರು ಬಾರಿ ಶಾಸಕ ಮೋಹನ್

ಉತ್ತರದಲ್ಲಿ ತ್ರಿವಿಕ್ರಮ ಸಾಧನೆಗೈದ ಬಿಜೆಪಿ ಹೈಕಮಾಂಡ್‌ಗೆ(BJP Highcommand) ಸಿಎಂ ಆಯ್ಕೆಯೇ ಕ್ಕಗ್ಗಂಟಾಗಿತ್ತು. 3 ರಾಜ್ಯಗಳ ಪೈಕಿ ಕೊನೆಗೂ ಎರಡು ರಾಜ್ಯಗಳ ಸಿಎಂ ಆಯ್ಕೆ ಗಜಪ್ರಹಸನಕ್ಕೆ ಹೈಕಮಾಂಡ್ ತೆರೆ ಎಳೆದಿದೆ. ಛತ್ತೀಸ್‌ಗಡ(Chhattisgarh) ಸಿಎಂ  ಆಯ್ಕೆ ನಡೆಸಿದ್ದ ಬಿಜೆಪಿ ಹೈಕಮಾಂಡ್ ಇಂದು ಮಧ್ಯಪ್ರದೇಶದಲ್ಲೂ(Madhya Pradesh) ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿಗೆ ತೆರೆ ಎಳೆದಿದೆ. ಸದ್ಯ ಮಧ್ಯಪ್ರದೇಶದಲ್ಲಿ ಹೊಸಬರಿಗೆ ಹೈಕಮಾಂಡ್‌ ಮಣೆ ಹಾಕಿದೆ. ಮೋಹನ್‌ ಯಾದವ್‌ ಮುಂದಿನ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ಬಾರಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಮೋಹನ್ ಯಾದವ್ ಈ ಬಾರಿ ಸಿಎಂ ಆಗಿದ್ದು, ಹಿಂದುಳಿದ ವರ್ಗದ ನಾಯಕನಿಗೆ ಸಿಎಂ ಪಟ್ಟ ಕಟ್ಟಲಾಗಿದೆ. ಮಧ್ಯ ಪ್ರದೇಶದಲ್ಲಿ 18 ವರ್ಷದ ಶಿವರಾಜ್ ಸಿಂಗ್ ಆಡಳಿತ ಅಂತ್ಯವಾದಂತೆ ಆಗಿದೆ. ಛತ್ತೀಸ್‌ಗಢದಂತೆಯೇ ಮಧ್ಯಪ್ರದೇಶದಲ್ಲೂ ಇಬ್ಬರು ಡಿಸಿಎಂ ಸೃಷ್ಟಿ ಮಾಡಲಾಗಿದೆ. ಜಗದೀಶ್ ದೇವ್ಡಾ, ರಾಜೇಂದ್ರ ಶುಕ್ಲಾಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಹಿರಿಯ ನಾಯಕ ನರೇಂದ್ರ ಸಿಂಗ್ ಥೋಮರ್‌ಗೆ ಸ್ಪೀಕರ್ ಪಟ್ಟ ಕೊಡುವ ಸಾಧ್ಯತೆ ಇದೆ. ವಿಷ್ಣುದೇವ್ ಸಾಯಿ ಛತ್ತೀಸ್‌ಗಢ ಮುಂದಿನ ಸಿಎಂ ಆಗಿದ್ದು, ಬುಡಕಟ್ಟು ಸಮುದಾಯಕ್ಕೆ ಮಣೆ ಹಾಕಿದ ಹೈಕಮಾಂಡ್. ಮಾಜಿ  ಸಿಎಂ ರಮಣ್ ಸಿಂಗ್ ಅವರ ಆಪ್ತನಿಗೆ CM ಪಟ್ಟ ಕಟ್ಟಲಾಗಿದೆ. 

ಇದನ್ನೂ ವೀಕ್ಷಿಸಿ:  ಲೋಕಸಭೆ ಚುನಾವಣೆ ಹೊತ್ತಲ್ಲೇ ಮೋದಿಗೆ ಬ್ರಹ್ಮಾಸ್ತ್ರ..! ಬಿಜೆಪಿ ಸರ್ಕಾರದ ಮುಂದಿನ ಗುರಿ ಪಿಒಕೆಯಾ..?

Video Top Stories