ಅಂದು ‘ಗೆಟ್​​ ಔಟ್​ ಇಂಡಿಯಾ’ ಇಂದು ರೆಡ್​ ಕಾರ್ಪೆಟ್​ ಸ್ವಾಗತ! ಮೋದಿ ಬೈದು ಅಧಿಕಾರಕ್ಕೇರಿದ್ದವನೇ ಮೋದಿಗೆ ನಮೋ ಎಂದ!

ಪ್ರಧಾನಿ ಮೋದಿ ಮಾಲ್ಡೀವ್ಸ್‌ನ 60ನೇ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ. ಹಿಂದೆ 'ಇಂಡಿಯಾ ಔಟ್' ಎಂದು ಘೋಷಣೆ ಕೂಗಿದ್ದವರು ಈಗ ಮೋದಿಯವರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.23): ಇದೇ ತಿಂಗಳು 25 ಮತ್ತು 26ರಂದು ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ. ಮಾಲ್ಡೀವ್ಸ್‌​​​​​ನ 60ನೇ ಸ್ವಾತಂತ್ರ ದಿನಾಚರಣೆ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ. 

ಇದೇ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಪ್ರಮುಖ ಒಪ್ಪಂದಗಳು ನಡೆಯಲಿವೆ. ಪ್ರಧಾನಿ ಮೋದಿಯವರ ಈ ಭೇಟಿ ಈಗ ಜಗತ್ತಿನಾದ್ಯಂತ ದೊಡ್ಡ ಚರ್ಚೆಯಾಗುತ್ತಿದೆ. ಯಾಕೆಂದ್ರೆ ಒಂದು ವರ್ಷದ ಹಿಂದೆ ಇಂಡಿಯಾ ಔಟ್​ ಎಂದವರು ಈಗ ಇಂಡಿಯಾದ ಪ್ರಧಾನಿಗೆ ರೆಡ್​​​ ಕಾರ್ಪೆಟ್​ ಹಾಕಿ ಸ್ವಾಗತಿಸಿದ್ದಾರೆ. 

ಮೋದಿ ಕೊಟ್ಟ ಒಂದೇ ಒಂದು ಮಾಸ್ಟರ್​ ಸ್ಟ್ರೋಕ್‌ಗೆ ಎದ್ನೋ ಬಿದ್ನೋ ಎಂದು ಭಾರತಕ್ಕೆ ಓಡೋಡಿ ಬಂದಿದ್ದ ಮೊಹಮ್ಮದ್​​ ಮುಯಿಝು ಮೋದಿ ಸ್ನೇಹ ಬೆಳೆ ಬಯಸಿದ್ದರು. ಈಗ ಅದೇ ಸ್ನೇಹ ಮತ್ತಷ್ಟು ಬಲಗೊಂಡು ಮೋದಿ ಮಾಲ್ಡೀವ್ಸ್​ ಪ್ರವಾಸದರವರೆಗೂ ಬಂದು ನಿಂತಿದೆ. 

Related Video