ಯೋಧರೊಟ್ಟಿಗೆ ದೀಪಾವಳಿ ಆಚರಿಸಿದ ಮೋದಿ: ಎಲ್ಲಿ ಭಾರತೀಯ ಸೇನೆ ಇರುತ್ತದೆಯೋ ಅದೇ ದೇವಾಲಯವೆಂದ ಪ್ರಧಾನಿ
ಹಿಮಾಚಲ ಪ್ರದೇಶದಲ್ಲಿ ಭದ್ರತಾ ಪಡೆಯೊಂದಿಗೆ ಮೋದಿ ದೀಪಾವಳಿ
ದೀಪಾವಳಿ ಹಬ್ಬದಂದು ಸೈನಿಕರ ಕರ್ತವ್ಯ ನಿಷ್ಠೆ ಪ್ರಶಂಸಿಸಿದ ಮೋದಿ
ಚಂದ್ರಯಾನದಲ್ಲಿ ವಿಜ್ಞಾನಿಗಳ ಸಾಧನೆಯನ್ನು ನೆನಪಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಎಂದಿನಿಂತೆ ಈ ವರ್ಷವೂ ದೇಶ ಕಾಯೋ ಯೋಧರೊಂದಿಗೆ ದೀಪಾವಳಿ ಹಬ್ಬ(Diwali Festival) ಆಚರಿಸಿದ್ದಾರೆ. ಇದು ಸೈನಿಕರೊಂದಿಗೆ ನರೇಂದ್ರ ಮೋದಿ ಆಚರಿಸಿಕೊಂಡ ಹತ್ತನೇ ದೀಪಾವಳಿ. 2014ರಿಂದ ಇಲ್ಲಿಯವರೆ ಮೋದಿ ಪ್ರತಿ ದೀಪಾವಳಿ ಹಬ್ಬವನ್ನು ಸೈನಿಕರೊಂದಿಗೆ ಆಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಈ ವರ್ಷವೂ ಸಹ ದೇಶ ಕಾಯೋ ಯೋಧರೊಂದಿಗೆ(Soldiers) ದೀಪಾವಳಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಈ ವರ್ಷದ ದೀಪಾವಳಿಯನ್ನು ಹಿಮಾಚಲ ಪ್ರದೇಶದ ಲೆಪ್ಟಾದಲ್ಲಿ ಆಚರಿಸಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ(BJP) ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಪಕ್ಷವನ್ನು ದೊಡ್ಡ ಬಹುಮತದೊಂದಿಗೆ ಗೆಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿಯಾಗ್ತಾರೆ. ಅಂದಿನಿಂದ ಇಲ್ಲಿವರೆಗೆ ಪ್ರತಿ ದೀಪಾವಳಿ ಹಬ್ಬವನ್ನು ದೇಶ ಕಾಯುವ ಸೈನಿಕರೊಂದಿಗೆ ಮೋದಿ ಆಚರಿಸಿಕೊಂಡು ಬಂದಿದ್ದಾರೆ. ಈ ವರ್ಷವೂ ಸಹ ಅದೇ ಸಂಪ್ರದಾಯವನ್ನು ಮೋದಿ ಮುಂದುವರೆಸಿಕೊಂಡು ಹೋಗಿದ್ದಾರೆ. ಹಿಮಾಚಲ ಪ್ರದೇಶದ (Himachal pradesh) ಲಿಪ್ಚಾ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಸಂಭ್ರಮ ಆನಂಧಿಸಿದ ಮೋದಿ, ಈ ಸಂದರ್ಭದಲ್ಲಿ ಅನೇಕ ವಿಚಾರಗಳನ್ನು ಯೋಧರೊಂದಿಗೆ ಹಂಚಿಕೊಂಡರು. ದೀಪಾವಳಿ ಹಬ್ಬದ ವಿಶೇಷವೇಬೆಂದ್ರೆ, ಇದು ಪ್ರತಿಯೊಬ್ಬ ಭಾರತೀಯನ ಬದುಕಲು ಹೊಸ ಬೆಳಕು ಚೆಲ್ಲುತ್ತದೆ ಎಂದು ಮೋದಿ ಹೇಳಿದರು. ಈ ಹಬ್ಬ ನಾನು ನೀವು ಸೇರಿದಂತೆ, ಎಲ್ಲ ಭಾರತೀಯರಿಗೂ ದೀಪಾವಳಿ ಹಬ್ಬದಂದು ಎಲ್ಲರ ಬಾಳಲ್ಲೂ ಹೊಸ ಬೆಳಕು ಪ್ರಕಾಶಿಸುತ್ತಿದೆ ಅನ್ನೋದು ನನ್ನ ನಂಬಿಕೆ. ನಿಮಗೂ ಮತ್ತು ದೇಶದ ಎಲ್ಲ ಪ್ರಜೆಗಳಿಗೂ ಭಾರತ ಗಡಿಯ ಕೊನೇ ಹಳ್ಳಿಯಿಂದ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯವನ್ನು ತಿಳಿಸುತ್ತೇನೆ.
ಇದನ್ನೂ ವೀಕ್ಷಿಸಿ: ಕಮಲವನ್ನು ಗೆಲ್ಲಿಸೋ ಮೊದಲು.. ಬಿಜೆಪಿ ಗೆಲ್ಲುವ ಚಾಲೆಂಜ್..!