ಒಂದು ಕಾಲದಲ್ಲಿ ಇಂದಿರಾ ಗಾಂಧಿ ಭದ್ರತಾ ಅಧಿಕಾರಿ.. ಈಗ ಮಿಜೋರಾಂ ಸಿಎಂ ಆಗ್ತಾರಾ ?

ಈಶಾನ್ಯ ರಾಜ್ಯವಾದ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್  ಹೀನಾಯ ಸೋಲುಕಂಡಿದೆ. 
 

First Published Dec 5, 2023, 3:49 PM IST | Last Updated Dec 5, 2023, 3:51 PM IST

ಮಿಜೋರಾಂನಲ್ಲಿ ಮತ್ತೆ ಪ್ರಾದೇಶಿಕ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದೆ. ಝಡ್‌ಪಿಎಂಗೆ( ZPM) ಸ್ಪಷ್ಟ ಬಹುಮತವನ್ನು ಮಿಜೋರಾಂ ಮತದಾರ ನೀಡಿದ್ದಾನೆ. ಆಡಳಿತರೂಢ ಎಂಎನ್ಎಫ್‌ಗೆ ಚುನಾವಣೆಯಲ್ಲಿ ಭಾರೀ ಸೋಲು ಉಂಟಾಗಿದೆ. ಚುನಾವಣೆಯಲ್ಲಿ ZPMಗೆ 27 ಸ್ಥಾನ, ಎಂಎನ್ಎಫ್‌ 10 ಸ್ಥಾನ ದೊರೆತಿದ್ದು, ಮಿಜೋರಾಂನಲ್ಲಿ 5 ಸ್ಥಾನದಿಂದ 1 ಸ್ಥಾನಕ್ಕೆ ಕಾಂಗ್ರೆಸ್(Congress) ಕುಸಿದಿದೆ. ಈ ಬಾರಿ ಕೇವಲ 2 ಸ್ಥಾನಗಳಿಗಷ್ಟೇ ಬಿಜೆಪಿ(BJP)ತೃಪ್ತಿಪಟ್ಟುಕೊಂಡಿದೆ. ಮಿಜೋರಾಂನ ಹಾಲಿ ಸಿಎಂಗೆ ಚುನಾವಣೆಯಲ್ಲಿ ಸೋಲು ಉಂಟಾಗಿದ್ದು, ಐಜ್ವಾಲಾ ಪೂರ್ವ ಕ್ಷೇತ್ರದಲ್ಲಿ ಜೋರಾಂಥಾಂಗಗೆ ಸೋಲಾಗಿದೆ. ZPMನ ಲಾಲ್ಡುಹೋಮಾ ಮಿಜೋರಾಂನ ಮುಂದಿನ ಸಿಎಂ ಆಗುವ ಸಾಧ್ಯತೆ ಇದೆ. ಮಿಜೋರಾಂನಲ್ಲಿ(Mizoram) ಎಂಎನ್‌ಎಫ್ ಮತ್ತು ಕಾಂಗ್ರೆಸ್‌ನ ಪ್ರಾಬಲ್ಯಕ್ಕೆ ತೆರೆ ಎಳೆದು ಝಡ್‌ಪಿಎಂಗೆ ಅಧಿಕಾರ ನೀಡಿದ ನಾಯಕ ಲಾಲ್ದುಹೋಮ, ಎಲ್ಲೆಲ್ಲೂ ಅವರ ಹೆಸರು ಈಗ ಮಿಜೋರಾಂನಲ್ಲಿ ಸದ್ದು ಮಾಡುತ್ತಿದೆ. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಲಾಲ್ದುಹೋಮ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತೆಯ ಉಸ್ತುವಾರಿವಾಗಿ ಕಾರ್ಯ ನಿರ್ವಹಿಸಿದ್ದರು. 

ಇದನ್ನೂ ವೀಕ್ಷಿಸಿ:  3 ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ..!ಪ್ರಕೃತಿಯ ಡೆಡ್ಲಿ ಡಿಸೆಂಬರ್ ಆಟ ಶುರುವಾಯ್ತಾ..!?