ರೈತರ ತಡೆಯುವಲ್ಲಿ ತಲ್ಲೀನರಾದ ಪೊಲೀಸರು, ಟ್ರ್ಯಾಕ್ಟರ್ ಬಂದದ್ದೂ ತಿಳಿಯಲಿಲ್ಲ: ದುರಂತ ಅಂತ್ಯ!
ದೆಹಲಿಯ ಕೆಂಪುಕೋಟೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ಕೊರೋನಾ ಮಹಾಮಾರಿ ಒಂದೆಡೆಯಾದರೆ, ಇತ್ತ ರೈತರ ಪ್ರತಿಭಟನೆಯ ಕಿಚ್ಚು ಇದಕ್ಕೆ ಕಾರಣವಾಗಿತ್ತು. ಇನ್ನು ದೆಹಲಿ ಪೊಲೀಸರು ರೈತರಿಗೆ ಟ್ರಾಕ್ಟರ್ ಪರೇಡ್ ನಡೆಸುವ ಅವಕಾಶ ನೀಡಿದ್ದರಾದರೂ ಷರತ್ತುಗಳನ್ನು ವಿಧಿಸಿದ್ದರು. ಆದರೆ ರೈತರ ಆಕ್ರೋಶಕ್ಕೆ ಎಲ್ಲವೂ ತಲೆ ಕೆಳಗಾಗಿದೆ.
ಬೆಂಗಳೂರು(ಜ.27): ದೆಹಲಿಯ ಕೆಂಪುಕೋಟೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ಕೊರೋನಾ ಮಹಾಮಾರಿ ಒಂದೆಡೆಯಾದರೆ, ಇತ್ತ ರೈತರ ಪ್ರತಿಭಟನೆಯ ಕಿಚ್ಚು ಇದಕ್ಕೆ ಕಾರಣವಾಗಿತ್ತು. ಇನ್ನು ದೆಹಲಿ ಪೊಲೀಸರು ರೈತರಿಗೆ ಟ್ರಾಕ್ಟರ್ ಪರೇಡ್ ನಡೆಸುವ ಅವಕಾಶ ನೀಡಿದ್ದರಾದರೂ ಷರತ್ತುಗಳನ್ನು ವಿಧಿಸಿದ್ದರು. ಆದರೆ ರೈತರ ಆಕ್ರೋಶಕ್ಕೆ ಎಲ್ಲವೂ ತಲೆ ಕೆಳಗಾಗಿದೆ.
ಹೌದು ನಿನ್ನೆ ದೆಹಲಿಯ ಕೆಂಪುಕೋಟೆಯ ದೃಶ್ಯ ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಒಂದೆಡೆ ಕೆಂಪುಕೋಟೆಯ ಮೇಲಿನ ರಾಷ್ಟ್ರಧ್ವಜ ಕಿತ್ತೆಸೆದು ಸಿಖ್ ಧ್ವಜಾರೋಹಣವಾಗಿದ್ದರೆ, ಮತ್ತೊಂದೆಡೆ ರೈತರ ಕೋಪಕ್ಕೆ ತತ್ತರಿಸಿದ ಪೊಲೀಸರು ಅವರಿಂದ ಬಚಾವಾಗಲು ಅಂಗಲಾಚಿದ್ದಾರೆ. ಸದ್ಯ ದಾಳಿ ವೇಳೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ವಿಡಿಯೋಗಳು ವೈರಲ್ ಆಗಿವೆ.
ರೈತರ ಹಾಗೂ ಪೊಲೀಸರ ನಡುವಿನ ಈ ಸಂಘರ್ಷ ಹಲವಾರು ಸವಾಲುಗಳನ್ನು ಹುಟ್ಟಿ ಹಾಕಿದೆ. ಪೊಲೀಸರ ಮೇಲೆ ಇದೆಂಥಾ ದೌರ್ಜನ್ಯ. ನ್ಯಾಯಕ್ಕಾಗಿ ಇಂಥ ಹೋರಾಟ ನಡೆಸುವುದು ಅನ್ಯಾಯವಲ್ಲವೇ? ಎಂಬುವುದು ಹಲವರ ಪ್ರ