ರಾಮನೂರಿನಲ್ಲಿ ಲಕ್ಷಾಂತರ ಭಕ್ತರು, ಅಯೋಧ್ಯೆ ಭದ್ರತಾ ವ್ಯವಸ್ಥೆ ಹೇಗಿದೆ?
ರಾಮ ಮಂದಿರದಲ್ಲಿ ಮೂರನೇ ದಿನವೂ ಭಕ್ತರ ಪ್ರವಾಹ ಕಂಡಿದೆ. ಬಾಲಕರಾಮನ ದರ್ಶನಕ್ಕಾಗಿ ಭಕ್ತರ ನೂಕುನುಗ್ಗಲು ಉಂಟಾಗಿದೆ. ಇದರ ನಡುವೆ ಅಯೋಧ್ಯೆ ಭದ್ರತಾ ವ್ಯವಸ್ಥೆಯ ಬಗ್ಗೆ ಕುತೂಹಲ ಉಂಟಾಗಿದೆ.
ಅಯೋಧ್ಯೆ (ಜ.24): ಮೊದಲನೇ ದಿನ 5 ಲಕ್ಷ ಮಂದಿ ಅಯೋಧ್ಯೆಯಲ್ಲಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಇಂದೂ ಕೂಡಾ ಭಕ್ತಸಾಗರವೇ ನೆರೆದಿದೆ. ಸದ್ಯಕ್ಕೆ ಅಯೋಧ್ಯೆಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಇದರ ನಡುವೆ ಮೋದಿ ಸರ್ಕಾರ ಕೂಡ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸದ್ಯದ ಮಟ್ಟಿಗೆ ಅಯೋಧ್ಯೆಗೆ ಹೋಗುವ ಯೋಚನೆ ಮಾಡಬೇಡಿ ಎಂದು ಹೇಳಿದೆ. ಅಯೋಧ್ಯೆಯಲ್ಲಿ ಭಕ್ತ ಸಾಗರವೇ ಇದ್ದು, ಮಾರ್ಚ್‌ನಂಥರ ದರ್ಶನದ ಯೋಜನೆ ರೂಪಿಸಿಕೊಳ್ಳಿ ಎಂದಿದ್ದಾರೆ.
ಮಾರ್ಚ್‌ವರೆಗೆ ಆಯೋಧ್ಯೆ ಭೇಟಿ ಮಾಡದಂತೆ ಸಂಪುಟ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ!
ಇನ್ನೊಂದೆಡೆ ಅಯೋಧ್ಯೆಯ ದೇವಸ್ಥಾನದ ಒಳಗಡೆ ಸ್ವತಃ ಪೊಲೀಸರಿಂದಲೇ ದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ. ಮೈ ಕೊರೆಯುವ ಚಳಿಯನ್ನೇ ಲೆಕ್ಕಿಸದೇ ಭಕ್ತಗಣ ಅಯೋಧ್ಯೆಯತ್ತ ಆಗಮಿಸುತ್ತಿದೆ. ಇದರ ನಡುವೆ ಆರ್‌ಎಎಫ್‌ನ 1 ಸಾವಿರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.