LokSabha Election: AI ಮೂಲಕ ಚುನಾವಣೆ ಟಾರ್ಗೆಟ್ ಮಾಡಿತಾ ಚೀನಾ? ಮೈಕ್ರೋಸಾಫ್ಟ್ ಇಂಟೆಲಿಜನ್ಸ್ ಗುಪ್ತ ವರದಿ ಹೇಳಿದ್ದೇನು ?

ಮೋದಿ ಹ್ಯಾಟ್ರಿಕ್ ಗೆಲುವು ತಡೆಯಲು ಚೀನಾ ಸಂಚು
ಚೀನಾ ಷ್ಯಡ್ಯಂತ್ರದ ಎಚ್ಚರಿಕೆ ಕೊಟ್ಟ   ಮೈಕ್ರೋಸಾಫ್ಟ್ 
AI ಮೂಲಕ ಬ್ಯಾಡ್ ವೈರಸ್ ಹರಡಿಸಲು ಚೀನಾ ಸಂಚು

First Published Apr 8, 2024, 10:09 AM IST | Last Updated Apr 8, 2024, 10:10 AM IST

ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ(Loksabha) ಮೇಲೆ ಇಡೀ ಜಗತ್ತೆ ಕಣ್ಣಿಟ್ಟಿದೆ. ಕೆಲ ದೇಶಗಳು ಒಳ್ಳೇ ಉದ್ದೇಶ ಮತ್ತು ಕುತೂಹಲದಿಂದ ಕಣ್ಣಿಟ್ಟಿದ್ರೆ, ಇನ್ನು ಕೆಲ ಭಾರತ ವಿರೋಧಿ ದೇಶಗಳು ಕೆಟ್ಟ ದೃಷ್ಟಿಯಿಂದ ಕಣ್ಣಿಟ್ಟಿದೆ. ಭಾರತದ(India) ಹೆಸರು ಕೇಳಿದ್ರೆ ಸಾಕು ಕೆಂಡ ಉಗುಳುವ ಚೀನಾ(China) ಈಗ ಭಾರತದ ಚುಣಾವಣೆ ಮೇಲೆ ಕಳ್ಳಗಣ್ಣಿಟ್ಟಿದೆ. ಈ ಚುನಾವಣೆಯಲ್ಲಿ(Election) ಜನರಿಗೆ ಸುಳ್ಳು ಸುದ್ದಿ ಹಬ್ಬಿಸಿ ದಾರಿ ತಪ್ಪಿಸೋ ಕೆಲ್ಸವನ್ನು ಚೀನಾ ಮಾಡುತ್ತಿದೆಯಂತೆ. ಹೀಗಂತ ಸಾಫ್ಟ್‌ವೇರ್‌ ಇಂಟೆಲಿಜನ್ಸ್ ಭಾರತವನ್ನು ಎಚ್ಚರಿಸಿದೆ. ಬೇರೆಯವರನ್ನು ತುಳಿತು ತಾಳು ಬೆಳೆದು ಬೀಗುವುದು. ಬೇರೆಯವರು ಗಡಿಯೊಳಗೆ ಅಕ್ರಮವಾಗಿ ನುಗ್ಗಿ, ತನ್ನದಲ್ಲದ ಜಾಗ ಕಬಳಿಸಿಕೊಂಡು, ದೇಶದ ವಿಸ್ತೀರ್ಣ ಹೆಚ್ಚಿಸಿಕೊಳ್ಳುವುದು. ಈ ಎರಡು ಪ್ರಮುಖ ಕೆಟ್ಟತನ. ಹಾಗೆನೇ ಚೀನಾಗೆ ತನ್ನ ಚಿಂತೆಗಿಂತ ಬೇರೆಯವರ ಬಗ್ಗೆನೇ ಹೆಚ್ಚು ಚಿಂತೆ ಮಾಡುತ್ತೆ. ಯಾರನ್ನು ಹೇಗೆ ಸದೆಬಡಿಯಬೇಕು, ಯಾರನ್ನು ಹೇಗೆ ದಿವಾಳಿ ಮಾಡಬೇಕು, ಯಾರನ್ನೂ ಹೇಗೆ ಸಂಕಷ್ಟಕ್ಕೆ ಸಿಲುಕಿಸಬೇಕು, ಯಾರನ್ನು ಹೇಗೆ ತನ್ನ ಅಂಕಿಯಲ್ಲಿಟ್ಟುಕೊಳ್ಳಬೇಕು, ಯಾರನ್ನು ಹೇಗೆ ದಿಕ್ಕು ತಪ್ಪಿಸಬೇಕು. ಈ ರೀತಿಯ ಯೋಚನೆಗಳಲ್ಲಿ ಚೀನಾ ಎತ್ತಿದ ಕೈ. ಅದ್ರಲ್ಲೂ ಭಾರತದ ಮೇಲೆ ಚೀನಾ ಸದಾ ಇಂದು ಕಣ್ಣೀಟ್ಟಿರುತ್ತೆ. ಈಗ ದೇಶದಲ್ಲಿ ಲೋಕಸಭಾ ಚುಣಾವಣೆ ನಡೆಯುತ್ತಿದೆ. ಈ ಚುನಾವಣೆ ಮೇಲೆ ಚೀನಾ ತನ್ನ ಕಳ್ಳಗಣ್ಣು ನೆಟ್ಟಿದೆಯಂತೆ.

ಇದನ್ನೂ ವೀಕ್ಷಿಸಿ:  ಸಾಗರ ದಾಟಿದ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್: ಅರಬ್ಬರ ನಾಡು ದುಬೈನಲ್ಲಿ 23 ಸಾಧಕರಿಗೆ ಪ್ರಶಸ್ತಿ ಪ್ರದಾನ