ಮಣಿಪುರದಲ್ಲಿ ನಿಲ್ಲದ ಮೀಸಲಾತಿ ದಂಗೆ: ರಕ್ತ ಚರಿತ್ರೆಯ ಸ್ಫೋಟಕ ಸತ್ಯ ಬಿಚ್ಚಿಟ್ಟ ಸೇನಾಧಿಕಾರಿ..!

ಮಣಿಪುರ ದ್ವೇಷದ ಜ್ವಾಲೆಗೆ ಸುಟ್ಟು ಹೋದ ಬಿಜೆಪಿ ನಾಯಕರ ಮನೆಗಳು
ಮೈತೇಯಿ ಸಮುದಾಯವೇ ಕುಕಿ ಜನಾಂಗದ ಮೇನ್ ಟಾರ್ಗೆಟ್ 
ಗುಂಡಿನ ದಾಳಿ,ಕಂಡ ಕಂಡಲ್ಲಿ ಬೆಂಕಿ,ಈಶಾನ್ಯದಲ್ಲಿ ಯಾಕೀ ರಕ್ತದಾಹ?

Share this Video
  • FB
  • Linkdin
  • Whatsapp

ಭಾರತದ ಸುಂದರ ರಾಜ್ಯ ಮಣಿಪುರ ಈಗ ಅಕ್ಷರಶಃ ಮರಣಪುರವಾಗಿದೆ. ರಾಜ್ಯದಲ್ಲಿ ಹೊತ್ತಿ ಉರಿದ ಜನಾಂಗಿಯ ದ್ವೇಷದ ಬೆಂಕಿ ಮತ್ತಷ್ಟು ದುಪ್ಪಟ್ಟಾಗಿದೆ. ರಕ್ತಪಾತದ 2ನೇ ಅಲೆ ಮಣಿಪುರವನ್ನ ಸ್ಮಶಾನಪುರ ಮಾಡಿ ಹಾಕಿದೆ. ಇಷ್ಟು ದಿನ ಒಟ್ಟಿಗೆ ಬಾಳಿದವರನ್ನ ಸುಟ್ಟು ಹಾಕ್ತಿದ್ದಾರೆ. ಮಣಿಪುರ ಮಹಾದಂಗೆಯಲ್ಲಿ ಮುಳುಗಿ ಹೋಗಿದೆ. ಮನುಷ್ಯರ ಮಾರಣ ಹೋಮ ಮತ್ತೆ ಶುರುವಾಗಿದೆ. 47 ದಿನ ಬರೋಬ್ಬರಿ 47 ದಿನಗಳಿಂದ ಧಗ ಧಗಿಸುತ್ತಿರುವ ದ್ವೇಷದ ಜ್ವಾಲೆ. ಮೇ3 ರಂದು ರಕ್ತದಾಹಿಗಳು, ರಕ್ಕಸರು ಹಳ್ಳಿಗೆ ಬೆಂಕಿ ಇಟ್ಟಿದ್ರು, ದೇವಸ್ಥಾನ, ಚರ್ಚ್ ಬಂಗಲೆಗಳಿಗೆ ಬೆಂಕಿ ಇಟ್ಟು ಅಟ್ಟಹಾಸ ಮೆರೆದಿದ್ದರು. ಜನಾಂಗಿಯ ದ್ವೇಷವನ್ನೇ ಉಸಿರಾಡೋ ಕಿರಾತಕರು ತಮ್ಮ ನೆರೆಹೊರೆಯವರನ್ನೆ ಹೊಸಕಿ ಹಾಖಿದ್ರು. ಇಲ್ಲಿ ತನಕ ತಮ್ಮ ಜೊತೆ ವಾಸಿಸುತ್ತಿದ್ದವರ ರಕ್ತ ಕುಡಿದು ಕ್ರೌರ್ಯ ಮೆರೆಯೋಕೆ ಶುರು ಮಾಡಿದ್ರು. ಅನ್ಯ ಸಮುದಾಯದ ಮನೆಗಳನ್ನ ಹುಡುಕಿ ಹುಡುಕಿ ಬೆಂಕಿ ಇಡೊ ಕೆಲಸ ಶುರು ಮಾಡಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: ಸಂಚಲನ ಸೃಷ್ಟಿಸಿದೆ ಡಿ.ಕೆ. ಸುರೇಶ್ ವೈರಾಗ್ಯದ ಹೇಳಿಕೆ: ಲೋಕಸಭೆ ಸನಿಹದಲ್ಲೇ ಕಾಂಗ್ರೆಸ್‌ಗೆ ಶಾಕ್ !

Related Video