ಡಿ. 5ಕ್ಕೆ ಪದಗ್ರಹಣ, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು?

ಡಿಸೆಂಬರ್ 5 ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ. ಏಕನಾಥ್ ಶಿಂಧೆ ಬಿಜೆಪಿ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ, ಆದರೆ ಖಾತೆ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉದ್ಭವಿಸಿವೆ.

First Published Dec 2, 2024, 8:28 PM IST | Last Updated Dec 2, 2024, 8:28 PM IST

ಬೆಂಗಳೂರು (ಡಿ.2): ಮಹಾರಾಷ್ಟ್ರಕ್ಕೆ ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವ ಕುತೂಹಲ ಗರಿಗೆದರಿದೆ. ಮೂಲಗಳ ಪ್ರಕಾರ ಡಿಸೆಂಬರ್‌ 5 ರಂದು ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಅದೇ ದಿನ ಸಿಎಂ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.

ಇಲ್ಲಿವರೆಗೂ ಮಹಾರಾಷ್ಟ್ರ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಮಹಾಯುತಿ ಮಿತ್ರಕೂಟದಲ್ಲಿ ಯಾವುದೇ ಭಿನ್ನಮತ ಇಲ್ಲ. ಬಿಜೆಪಿ ನಿರ್ಧಾರಕ್ಕೆ ನನ್ನ ಬೆಂಬಲ ಎಂದು ಶಿವಸೇನೆಯ ಏಕನಾಥ್‌ ಶಿಂಧೆ ಹೇಳಿದ್ದಾರೆ.

ವಕ್ಫ್‌ ಬೋರ್ಡ್‌ಗೆ 10 ಕೋಟಿ ಅನುದಾನ ಮೀಸಲಿಟ್ಟ ಮಹಾರಾಷ್ಟ್ರ ಸರ್ಕಾರ, ವಿಎಚ್‌ಪಿ ವಿರೋಧ!

ಇದರಿಂದಾಗಿ ಫಡ್ನವೀಸ್‌ಗೆ ಮಹಾರಾಷ್ಟ್ರ ಪಟ್ಟಾಭಿಷೇಕ ಫಿಕ್ಸ್‌ ಆಗಬಹುದು ಎನ್ನಲಾಗಿದೆ. ಆದರೆ, ಮಹಾಯುತಿಯಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ಶುರುವಾಗಿದೆ. ಪ್ರಬಲ ಖಾತೆಗಳಿಗಾಗಿ ಬಿಜೆಪಿ-ಶಿಂಧೆ ಮಧ್ಯೆ ಫೈಟ್​ ನಡೆದಿದೆ. ಪ್ರಬಲ 3 ಖಾತೆಗಳಿಗಾಗಿ ಶಿವಸೇನೆ ಪಟ್ಟು ಹಿಡಿದಿದೆ.