ವಕ್ಫ್ ಬೋರ್ಡ್‌ಗೆ 10 ಕೋಟಿ ಅನುದಾನ ಮೀಸಲಿಟ್ಟ ಮಹಾರಾಷ್ಟ್ರ ಸರ್ಕಾರ, ವಿಎಚ್‌ಪಿ ವಿರೋಧ!
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ವಕ್ಫ್ ಮಂಡಳಿಗೆ ₹10 ಕೋಟಿ ನೀಡಲು ನಿರ್ಧರಿಸಿದ್ದು, ವಿಎಚ್‌ಪಿ ತೀಕ್ಷ್ಣವಾಗಿ ಟೀಕಿಸಿದೆ. ಧಾರ್ಮಿಕ ತುಷ್ಟೀಕರಣ ಎಂದು ಆರೋಪಿಸಿ, ಈ ನಿರ್ಧಾರ ಹಿಂಪಡೆಯದಿದ್ದರೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಮುಂಬೈ (ನ.29): ಒಂದೆಡೆ ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದೆ. ಇನ್ನೊಂದೆಡೆ ಕೇಂದ್ರದಲ್ಲೂ ಬಿಜೆಪಿ ವಕ್ಫ್ ಕಾಯ್ದೆ ವಿರುದ್ಧವಾಗಿ ಮಾತನಾಡುತ್ತಿದೆ. ಇದರ ನಡುವೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ವಕ್ಫ್ ಪ್ರೇಮ ತೋರಿರುವುದು ವಿಎಚ್‌ಪಿ ಆಕ್ರೋಶಕ್ಕೆ ಕಾರಣವಾಇದೆ. 24-25ರ ಆರ್ಥಿಕ ವರ್ಷದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಕ್ಫ್ ಮಂಡಳಿಗೆ ₹10 ಕೋಟಿ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ಈ ಕ್ರಮವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಿರೋಧಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಈ ಬಗ್ಗೆ ವರದಿ ಮಾಡಿದ್ದು, ಪ್ರಸ್ತುತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಔರಂಗಾಬಾದ್‌ನಲ್ಲಿರುವ ವಕ್ಫ್ ಬೋರ್ಡ್‌ಗೆ ₹ 2 ಕೋಟಿ ಮಂಜೂರು ಮಾಡಿದೆ, ಉಳಿದ ಹಣವನ್ನು ನಂತರ ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ.
ಹಂಚಿಕೆ ಕುರಿತು ಮಾತನಾಡಿದ ವಿಎಚ್‌ಪಿಯ ಕೊಂಕಣ ವಿಭಾಗದ ಕಾರ್ಯದರ್ಶಿ ಮೋಹನ್ ಸಾಲೇಕರ್ , 'ಮಹಾಯುತಿ ಸರ್ಕಾರವು ಧಾರ್ಮಿಕ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರಕಾರವೂ ಮಾಡದ ಕೆಲಸವನ್ನು ಮಹಾಯುತಿ ಸರಕಾರ ಮಾಡುತ್ತಿದೆ ಎಂದರು. ಧಾರ್ಮಿಕ ಸಮುದಾಯದವನ್ನು ಸಮಾಧಾನ ಪಡಿಸುವ ಕೆಲಸ ಮಾಡುತ್ತಿದೆ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ, ಮುಂಬರುವ ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭೆಯ ಚುನಾವಣೆಯಲ್ಲಿ ಮಹಾಯುತಿ ಪಕ್ಷಗಳು ಹಿಂದೂಗಳ ಕೋಪವನ್ನು ಎದುರಿಸಬೇಕಾಗುತ್ತದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಧಿ ಹಂಚಿಕೆಗೆ ವಿಎಚ್‌ಪಿ ವಿರೋಧಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ, ದಾಖಲೆಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ವಕ್ಫ್ ಬೋರ್ಡ್‌ನ ಡಿಜಿಟಲೀಕರಣಕ್ಕೆ ಹಣವನ್ನು ಮಂಜೂರು ಮಾಡಿದೆ ಎಂದು ವಿವರಿಸಿದರು. ಈ ಪ್ರಕ್ರಿಯೆಯು ಹಿಂದೂಗಳು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳಿಂದ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಗುರುತಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಇದಲ್ಲದೆ, ಅವರು ಯಾವುದೇ ಸಮುದಾಯದ ತುಷ್ಟೀಕರಣದ ಆರೋಪಗಳನ್ನು ನಿರಾಕರಿಸಿದರು.
Rules Change From 1st December: ಡಿಸೆಂಬರ್‌ನಲ್ಲಿ ಬದಲಾಗಲಿವೆ ಈ ನಿಯಮಗಳು
“ರಾಜ್ಯ ಸರ್ಕಾರವು ವಕ್ಫ್ ಮಂಡಳಿಯ ಡಿಜಿಟಲೀಕರಣಕ್ಕಾಗಿ ಹಣವನ್ನು ಮಂಜೂರು ಮಾಡಿದೆ. ದೋಷಗಳನ್ನು ಸರಿಪಡಿಸಲು ಪ್ರಕ್ರಿಯೆಯು ಅಗತ್ಯವಾಗಿತ್ತು. ಹಿಂದೂಗಳು ಮತ್ತು ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳಿಂದ ತಪ್ಪಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.