Maharashtra: ಪದ್ಮಪಾಳಯದ ಸೂತ್ರಕ್ಕೆ ಕಟ್ಟುಬೀಳುತ್ತಿಲ್ಲ ಏಕನಾಥ ಶಿಂಧೆ!

ಏಕನಾಥ್ ಶಿಂಧೆ ಮಹಾರಾಷ್ಟ್ರ ಸಿಎಂ ಪಟ್ಟಕ್ಕೆ ಪಟ್ಟು ಹಿಡಿದಿದ್ದು, ಬಿಜೆಪಿಗೆ ಟೆನ್ಶನ್‌ ಉಂಟುಮಾಡಿದೆ. ಶಿಂಧೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಸತಾರಾದಲ್ಲಿ ರಹಸ್ಯ ಮಾತುಕತೆಗಳು ನಡೆದಿವೆ.

First Published Dec 2, 2024, 8:41 PM IST | Last Updated Dec 2, 2024, 8:41 PM IST

ಬೆಂಗಳೂರು (ಡಿ.2): ಮಹಾರಾಷ್ಟ್ರ ಹೊಸ ಸಿಎಂ ವಿಚಾರದಲ್ಲಿ ಏಕನಾಥ್‌ ಶಿಂಧೆ ಪಟ್ಟು ಬಿಡುತ್ತಿಲ್ಲ. ಇದು ಕಮಲಪಾಳಯದಲ್ಲಿ ಟೆನ್ಶನ್‌ಗೆ ಕಾರಣವಾಗಿದೆ. ಪಟ್ಟಾಭಿಷೇಕಕ್ಕೆ ಮಹೂರ್ತ ಫಿಕ್ಸ್‌ ಮಾಡಲಾಗಿದೆ. ಆದರೆ, ಯಾರಿಗೆ ಪಟ್ಟ ಅನ್ನೋದೇ ಸದ್ಯದ ಸಸ್ಪೆನ್ಸ್‌.

ಪದ್ಮಪಾಳಯದ ಯಾವುದೇ ಸೂತ್ರಕ್ಕೂ ಏಕನಾಥ ಶಿಂಧೆ ಕಟ್ಟುಬೀಳುತ್ತಿಲ್ಲ. 1 ಬಯಕೆ ಈಡೇರದೇ ಹೋದ್ರೆ 2 ಬೇಡಿಕೆ ತೀರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ನಿಗೂಢ ಭೇಟಿಯಾಗಿ ರಹಸ್ಯ ಮಾತುಕತೆ ನಡೆದಿದೆ. ಅಷ್ಟಕ್ಕೂ ಸತಾರಾದಲ್ಲಿ ಆಗಿದ್ದೇನು? ಅನ್ನೋದೇ ಸದ್ಯದ ಎಲ್ಲರ ಕುತೂಹಲ.

ಡಿ. 5ಕ್ಕೆ ಪದಗ್ರಹಣ, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು?

ಶರದ್ ಪವಾರ್ ಹೊಸ ಲೆಕ್ಕಾಚಾರ ಈಗ ಕೋಲಾಹಲ ಸೃಷ್ಟಿಸಿದೆ. ಪಟ್ಟಕ್ಕಾಗಿ ದೆಹಲಿಯಲ್ಲಿ ಕಸರತ್ತು ಶುರುವಾಗಿದೆ. ಏಕನಾಥ್‌ ಶಿಂಧೆಗೆ ಹೈಕಮಾಂಡ್‌ ಆಫರ್‌ ಕೊಟ್ಟಿದ್ದರೂ, ಅವರೂ ಕೂಡ ಕೆಲವು ಕಂಡೀಷನ್‌ ಇಟ್ಟಿದ್ದಾರೆ. ಇದರಿಂದಾಗಿ ವಾರವಾದವರೂ ಮಹಾರಾಷ್ಟ್ರದ ಸಿಎಂ ಯಾರು ಅನ್ನೋದು ಬಗೆಹರಿದಿಲ್ಲ.