ಕರ್ನಾಟಕ ಸೋಲಿನಿಂದ ಪಾಠ ಕಲಿಯಿತಾ ಬಿಜೆಪಿ ಹೈಕಮಾಂಡ್..? ಮಧ್ಯಪ್ರದೇಶದಲ್ಲಿ ಸೀನಿಯರ್ಸ್ ಮೊರೆ ಹೋದ ಕಮಲ !


ಸೀನಿಯರ್ ಕಡೆಗಣನೆಯಿಂದ ಪೆಟ್ಟು ತಿಂದಿದ್ದ ಹೈಕಮಾಂಡ್
ಕರ್ನಾಟಕ ಪ್ರಯೋಗಸಾಲೆಯಿಂದ ಪಾಠ ಕಲಿತ ಹೈಕಮಾಂಡ್
ಮಧ್ಯಪ್ರದೇಶದಲ್ಲಿ ತನ್ನದೇ ಅಲಿಖಿತ ನಿಯಮಕ್ಕೆ ತಿಲಾಂಜಲಿ

First Published Nov 16, 2023, 10:43 AM IST | Last Updated Nov 16, 2023, 10:43 AM IST

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿರಿಯರಿಗೆ ಕೊಕ್ ಕೊಡಲಾಗಿತ್ತು. 70 ವರ್ಷ ದಾಟಿದವರಿಗೆ ಟಿಕೆಟ್(Ticket) ಇಲ್ಲ ಎನ್ನುವ ಮಾಡಲಾಗಿದ್ದು, ಇದೀಗ ಆ ರೂಲ್ಸ್ ಬ್ರೇಕ್ ಮಾಡಲಾಗಿದೆ. ತನ್ನದೇ ಅಲಿಖಿತ ನಿಯಮವನ್ನು ಬಿಜೆಪಿ ಹೈಕಮಾಂಡ್(BJP Highcommand) ಉಲ್ಲಂಘಿಸಿದೆ. 70 ವರ್ಷ ದಾಟಿದ 14 ಮಂದಿಗೆ ಮಧ್ಯಪ್ರದೇಶದಲ್ಲಿ ಹೈಕಮಾಂಡ್ ಟಿಕೆಟ್ ನೀಡಿದೆ. ಮಧ್ಯಪ್ರದೇಶದಲ್ಲಿ(Madhyapradesh) 80 ವರ್ಷ ದಾಟಿದವರಿಗೂ ಬಿಜೆಪಿಯಿಂದ ಟಿಕೆಟ್ ಕೊಡಲಾಗಿದೆ. ನಾಗೋಡ್ ಕ್ಷೇತ್ರದಲ್ಲಿ 80 ವರ್ಷದ ನಾಗೇಂದ್ರ ಸಿಂಗ್ ಸ್ಪರ್ಧೆ ಮಾಡಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ‘ಗೆಲುವೊಂದೇ ಮೂಲ ಮಂತ್ರ’ ಆಗಿದೆ. 230 ವಿಧಾನಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಸೀನಿಯರ್ಸ್‌ಗೆ ಟಿಕೆಟ್ ಕೊಡಲಾಗಿದೆ. ನವೆಂಬರ್ 17ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ 67 ವರ್ಷದ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿತ್ತು.

ಇದನ್ನೂ ವೀಕ್ಷಿಸಿ:  ತಾಲೂಕು ಬದಲಾವಣೆಗೆ ಗಾಬರಿಗೊಂಡ ಜನ: ಸಚಿವ ಸಂತೋಷ್ ಲಾಡ್ ಭೇಟಿ ಮಾಡಿ ಮನವಿ ಸಲ್ಲಿಕೆ