Ayodhya Ram Mandir: ಅಯೋಧ್ಯೆಯಲ್ಲಿ ಶುರು ರಾಮರಾಜ್ಯ.. ಹೇಗಿತ್ತು ರಾಮೋತ್ಸವ..?
500 ವರ್ಷಗಳ ಬಳಿಕ ಭವ್ಯ ಮಂದಿರಕ್ಕೆ ಮರಳಿದ ಶ್ರೀರಾಮ..!
ಸರಯೂ ನದಿ ತೀರದಲ್ಲಿ ವಿಜೃಂಭಣೆಯ ರಾಮ ಪಟ್ಟಾಭಿಷೇಕ..!
"ಮಂದಿರ್ ವಹೀ ಬನಾಯೇಂಗೇ" ಅಂದಿದ್ದರು ಎಲ್.ಕೆ ಅಡ್ವಾಣಿ..!
ಅದು ಶತಮಾನಗಳ ಕನಸು ನನಸಾದ ಅಮೃತಘಳಿಗೆ. ಶತಕೋಟಿ ಭಾರತೀಯರು ಪ್ರತೀಕ್ಷೆ ಮಾಡ್ತಿದ್ದದ್ದು ಇದೇ ಕ್ಷಣಕ್ಕಾಗಿ. ಕೋಟಿ ಕೋಟಿ ರಾಮಭಕ್ತರು ಚಾತಕ ಪಕ್ಷಿಗಳಂತೆ ಕಾಯ್ತಾ ಇದ್ದದ್ದು ಇದೇ ದಿನಕ್ಕಾಗಿ. ಆ ದಿನ ಬಂದೇ ಬಿಡ್ತು, ದೇವನಗರಿ ಅಯೋಧ್ಯೆಯಲ್ಲಿ(Ayodhya) ಶ್ರೀರಾಮ ಪಟ್ಟಾಭಿಷೇಕ ನಡೆದೇ ಬಿಡ್ತು. ನಮ್ಮ ರಾಮ ಮಂದಿರಕ್ಕೆ(Ram Mandir) ಮರಳಿ ಬಂದಿದ್ದಾನೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ರಾಮಜನ್ಮಭೂಮಿಯಲ್ಲಿ ತಲೆ ಎತ್ತಿ ನಿಂತಿರೋ ಮಂದಿರದಲ್ಲಿ ಶ್ರೀರಾಮಚಂದ್ರ ವಿರಾಜಮಾನನಾಗಿದ್ದಾನೆ. ರಾಮ ಮಂದಿರ ಕಟ್ಟಲು ಕಟಿ ಬದ್ಧರಾಗಿ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನದ ಅಭಿಜಿನ್ ಲಗ್ನದಲ್ಲಿ ಶ್ರೀರಾಮನಿಗೆ ಪ್ರಾಣ ಪ್ರತಿಷ್ಠೆ ನಡೆದಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಲು ಕಾತರಿಂದ ಕಾಯ್ತಾ ಇದ್ದವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಭಾರತದಲ್ಲಷ್ಟೇ ಅಲ್ಲ, ಸಪ್ತಸಾಗರದಾಚೆಯೂ ರಾಮಭಕ್ತರು ಆ ದಿನದ, ಆ ಕ್ಷಣದ ಪ್ರತೀಕ್ಷೆಯಲ್ಲಿದ್ರು. ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆಯನ್ನು ಎಲ್ಲರೂ ಎದುರು ನೋಡ್ತಾ ಇದ್ರು. ಹಾಗ್ ನೋಡಿದ್ರೆ, ರಾಮ ಪಟ್ಟಾಭಿಷೇಕದ ಕಾರ್ಯಕ್ರಮಗಳು, ಧಾರ್ಮಿಕ ವಿಧಿ ವಿಧಾನಗಳು ರಾಮಜನ್ಮಭೂಮಿಯಲ್ಲಿ ಒಂದು ವಾರದ ಹಿಂದೆಯೇ ಶುರುವಾಗಿದ್ವು. ಆದ್ರೆ ಸೋಮವಾರ ನಡೆದ ರಾಮೋತ್ಸವದ ತೂಕವೇ ಬೇರೆ.
ಇದನ್ನೂ ವೀಕ್ಷಿಸಿ: Raichur: ಚಾಡಿ ಹೇಳಿದ ಆರೋಪ: ಐದಾರು ಜನರ ಗುಂಪಿನಿಂದ ವ್ಯಕ್ತಿ ಮೇಲೆ ಹಲ್ಲೆ !